Advertisement
ಕಳೆದ ನಾಲ್ಕು ದಶಕಗಳಿಂದ ಕೆರೆಗಳನ್ನು ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿ ಯೋಜನೆಗಳ ಮೂಲಕ ನೀರು ತುಂಬಿಸಲಾಗುತ್ತಿದೆ. ತಾಲೂಕಿನ ಬಿಳಿಕೆರೆ ಹೋಬಳಿಯ ಜೀನಹಳ್ಳಿ ಕೆರೆ, ಕಸಬಾ ಹೋಬಳಿಯ ಬೀಜಗನಹಳ್ಳಿ ದೊಡ್ಡಕೆರೆ, ಸೋಮನಹಳ್ಳಿ ಕೆರೆಗಳು ಭರ್ತಿಯಾಗಿದ್ದು, ಈ ಭಾಗದ ಇನ್ನುಳಿದ ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದ್ದು, ಪವರ್ ಕಟ್‌ನದ್ದೇ ತೀವ್ರ ಸಮಸ್ಯೆಯಾಗಿದೆ.
Related Articles
Advertisement
ಬಿಳಿಕೆರೆ ಏತನೀರಾವರಿ ಯೋಜನೆ: 4.99 ಲಕ್ಷ ರೂ ವೆಚ್ಚದ ಯೋಜನೆಯು ಮೈಸೂರು-ಕೆ.ಆರ್.ನಗರ ಮುಖ್ಯರಸ್ತೆಯ ಹುಣಸೂರು ತಾಲೂಕಿನ ಹೊಸರಾಮನಹಳ್ಳಿ ಬಳಿ ಲಕ್ಷ್ಮಣತೀರ್ಥ ನದಿಗೆ ಪಂಪ್‌ಹೌಸ್ ನಿರ್ಮಿಸಿ, 220 ಎಚ್‌ಪಿ ಮೂರು ಮೋಟಾರ್ ಅಳವಡಿಸಿದ್ದು, ಒಮ್ಮೇಲೆ ಎರಡು ಮೋಟಾರ್ ಮೂಲಕ 6 ಕಿ.ಮೀ ದೂರದ ಜೀನಹಳ್ಳಿ ಕೆರೆಗೆ ಏರು ಕೊಳವೆ ಮೂಲಕ ನೀರು ತುಂಬಿಸಲಾಗುತ್ತಿದ್ದು, ವಾರದಲ್ಲಿ ಕೆರೆ ತುಂಬಿ ಕೋಡಿ ಬೀಳಲಿದೆ. ನಂತರ ಬಿಳಿಕೆರೆಯ ಕೆರೆ ಆನಂತರ ಹಳೇಬೀಡು ಕೆರೆಗೆ ನೀರು ತುಂಬಿಸಲಾಗುವುದು.
ಈ ಭಾಗದಲ್ಲಿ ಬಿಳಿಕೆರೆ ಬೈಪಾಸ್ ಆದ ನಂತರದಲ್ಲಿ ಕೆರೆ ಪಾಳು ಬಿದ್ದಿತ್ತು, ಅಲ್ಲದೆ ಅರಣ್ಯ ಇಲಾಖೆಯವರು ಕೆರೆ ಅಂಗಳದಲ್ಲೇ ಸಸಿನೆಟ್ಟು ಬೆಳೆಸಿದ್ದರು ಹಾಗೂ ಗ್ರಾಮದ ಚರಂಡಿ ನೀರು ಹರಿದು ಕಲುಷಿತಗೊಳ್ಳುವುದರ ಜೊತೆಗೆ ಬರಿದಾಗಿತ್ತು. ಕೆರೆಗೆ ನೀರು ತುಂಬದೆ ಗ್ರಾಮಸ್ಥರು, ಜಾನುವಾರುಗಳು ಸಂಕಷ್ಟಕೊಳಗಾಗಿದ್ದರು. ಮೂರು ಕೆರೆಗಳು ಭರ್ತಿಯಾದಲ್ಲಿ ಈ ಭಾಗದ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ, ಜಾನುವಾರುಗಳಿಗೆ ಅನುಕೂಲವಾಗಲಿದೆ.
ಬಿಳಿಕೆರೆ ಹಾಗೂ ಬೀಜಗನಹಳ್ಳಿ ನೀರಾವರಿ ಯೋಜನೆ ಯಶಸ್ವಿಯಾಗಿದ್ದು, ವಿದ್ಯುತ್ ಸಮಸ್ಯೆ ನಡುವೆಯೂ ಕೆರೆಗಳಿಗೆ ನೀರು ಹರಿಯುತ್ತಿದೆ. ಎರಡು ಕೋಟಿ ವೆಚ್ಚದ ಮರದೂರು ಏತ ನೀರಾವರಿ ಯೋಜನೆಗೆ ಅಗತ್ಯದಷ್ಟು ಗಾತ್ರದ ಪೈಪ್ ಬಳಸದೆ, ನಾಲ್ಕಾರು ಕಡೆ ಪೈಪ್ ಒಡೆದು ನೀರು ಪೋಲಾಗುವ ಜೊತೆಗೆ ರಸ್ತೆಯೂ ಹಾಳಾಗುತ್ತಿದೆ.
ನಿರೀಕ್ಷೆಯಂತೆ ಸೋಮನಹಳ್ಳಿ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬುವುದು ತಡವಾಗುತ್ತಿದೆ. ಮುಂದಾದರೂ ಹೆಚ್ಚಿನ ಗುಣಮಟ್ಟದ ಪೈಪ್ ಅಳವಡಿಸಿ, ಯೋಜನೆಯನ್ನು ಯಶಸ್ವಿಗೊಳಿಸಬೇಕು, ಇಲ್ಲಿನ ಸಣ್ಣ ನೀರಾವರಿ ಇಲಾಖೆ ಕಚೇರಿ ಮೈಸೂರಿಗೆ ವರ್ಗಾವಣೆ ಗೊಂಡಿದ್ದರಿಂದಲೂ ಅಧಿಕಾರಿಗಳಿಗೆ ಹೇಳಿಕೊಳ್ಳಲು ತೊಂದರೆಯಾಗಿದೆ ಎಂಬುದು ರೈತರ ಆರೋಪ.
40 ವರ್ಷಗಳಿಂದ ಬೀಜಗನಹಳ್ಳಿ ದೊಡ್ಡಕೆರೆ ತುಂಬದೆ ರೈತರು ಕೃಷಿ ಚಟುವಟಿಕೆಯಿಂದ ದೂರಾಗಿದ್ದೆವು, ದನ-ಕರುಗಳಿಗೆ ನೀರು ಕುಡಿಸಲು ಪರದಾಡುತ್ತಿದ್ದೆವು. ಮೇವಿಲ್ಲದೆ ದನಗಳು ಅಲೆಮಾರಿಗಳಂತೆ ಅಡ್ಡಾಡುತ್ತಿದ್ದವು, ಇದೀಗ ಶಾಸಕರ ವಿಶೇಷ ಆಸಕ್ತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.-ರಾಮರೆಡ್ಡಿ, ರೈತ, ಬೀಜಗನಹಳ್ಳಿ ಮದುವೆಯಾಗಿ ಜೀನಹಳ್ಳಿಗೆ ಬಂದು 8 ವರ್ಷವಾಗಿದೆ. ಬಿಳಿಕೆರೆ ಭಾಗದ ಕೆರೆಗಳಲ್ಲಿ ನೀರನ್ನು ಕಂಡೇ ಇರಲಿಲ್ಲ, ಬಟ್ಟೆ ತೊಳೆಯಲು, ದನಕರುಗಳಿಗೆ ನೀರು ಕುಡಿಸಲು ನಲ್ಲಿ ನೀರನ್ನೇ ಅವಲಂಬಿಸಿದ್ದೆವು, ಇದೀಗ ಕಾಲುವೆಯಲ್ಲಿ ನೀರು ಹರಿಯುವ ಪರಿ ಕಂಡು ಸಂತೋಷವಾಗಿದೆ. ಮುಂದೆ ನೆಮ್ಮದಿಯ ದಿನಗಳು ಬರಲಿವೆ ಎಂಬ ಆಶಾ ಭಾವನೆಯಲ್ಲಿದ್ದೇವೆ.
-ಗೌರಿ, ರೈತ ಮಹಿಳೆ, ಜೀನಹಳ್ಳಿ ಹುಣಸೂರು ತಾಲೂಕಿನ ಮೂರು ಕಡೆ ಏತನೀರಾವರಿ ಯೋಜನೆ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ. ಇದೀಗ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ವಿದ್ಯುತ್ ಸಮಸ್ಯೆಯೂ ಸಾಕಷ್ಟಿದ್ದರೂ ಮುಂದಿನ ಒಂದು ತಿಂಗಳಿಗೆ ಯಾವುದೇ ತೊಂದರೆಯಿಲ್ಲ, ಎಲ್ಲ ಕೆರೆಗಳಿಗೂ ನೀರು ತುಂಬಿಸಲಾಗುವುದು, ಮರದೂರು ಯೋಜನೆಗೆ ಅಳವಡಿಸಿರುವ ಏರ್‌ಪೈಪ್ ಮೂಲಕ ಕೆಲ ರೈತರು ಸಂಪರ್ಕ ಕಲ್ಪಿಸಿಕೊಂಡು, ನೀರು ಪಡೆಯುತ್ತಿದ್ದುದ್ದರಿಂದ ಅಲ್ಲಲ್ಲಿ ಪೈಪ್‌ಗ್ಳು ಒಡೆದು ನೀರು ಪೋಲಾಗುತ್ತಿತ್ತು ಇದನ್ನು ಸರಿಪಡಿಸಲಾಗಿದೆ.
-ಕೃಷ್ಣಮೂರ್ತಿ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಮೈಸೂರು. * ಸಂಪತ್ ಕುಮಾರ್