Advertisement

ಕೋವಿಡ್-19 ಭೀತಿ: ಶಹೀನ್ ಭಾಗ್ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ ಪೊಲೀಸರು

11:11 AM Mar 27, 2020 | Mithun PG |

ನವದೆಹಲಿ: ಭಾರತದಾದ್ಯಂತ ಕೋವಿಡ್-19 ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೆಹಲಿಯ ಶಹೀನ್ ಭಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಧರಣಿ ಸ್ಥಳದಿಂದ ಪ್ರತಿಭಟನಕಾರರನ್ನು  ಪೊಲೀಸರು ತೆರವುಗೊಳಿಸಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

Advertisement

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ 100 ದಿನಗಳಿಂದ ಶಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ  ಕೋವಿಡ್ 19 ವೈರಸ್ ಹಬ್ಬುವ ಭೀತಿಯಿಂದ ಪ್ರತಿಭಟನಾಕಾರರ ಸಂಖ್ಯೆಯೂ ದಿನೇ ದಿನೇ ಕಡಿಮೆಯಾಗುತ್ತಿತ್ತು. ಮಾತ್ರವಲ್ಲದೆ ಪ್ರತಿಭಟನಾ ಸ್ಥಳದಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಂಡಿದ್ದರು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಧರಣಿಯನ್ನು ಮುಂದುವರೆಸಿದ್ದರು,

ಆದರೆ ದೆಹಲಿಯಾದ್ಯಂತ ಲಾಕ್ ಡೌನ್ ಮಾಡಲು ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಪ್ರತಿಭಟನಾ ಸ್ಥಳದಿಂದ ಈ  ಮೊದಲೇ ತೆರಳುವಂತೆ ಪೊಲೀಸರು ವಿನಂತಿ ಮಾಡಿಕೊಂಡಿದ್ದರು. ಆದರೇ ಧರಣಿ ನಿರತರು ಜಗ್ಗದ ಕಾರಣ ಕಾನೂನಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಗ್ನೇಯ ದೆಹಲಿಯ ಪೊಲೀಸ್ ಉಪ ಆಯುಕ್ತ ಆರ್ ಪಿ ಮೀನಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next