Advertisement
ಇದು ದಿಲ್ಲಿಯಲ್ಲಿ ಕಳೆದ 76 ವರ್ಷಗಳಲ್ಲಿ ದಾಖಲಾದ ಮಾರ್ಚ್ ತಿಂಗಳ ಅತೀ ಗರಿಷ್ಠ ತಾಪಮಾನ ಎಂದು ಐಎಂಡಿ ತಿಳಿಸಿದೆ. ರವಿವಾರ ದಾಖಲಾದ ತಾಪಮಾನವು ವಾಡಿಕೆಗಿಂತ 8 ಡಿಗ್ರಿ ಅಧಿಕ ಎಂದೂ ಅದು ಹೇಳಿದ್ದು, 1945ರ ಮಾ. 31ರಂದು 40.5 ಡಿಗ್ರಿ ಸೆ. ಉಷ್ಣತೆ ದಾಖಲಾಗಿತ್ತು ಎಂದಿದೆ.
ಸೋಮವಾರ ದಕ್ಷಿಣ ಕನ್ನಡದ ಬಹುತೇಕ ಕಡೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ, ಮಾಳ ಮತ್ತಿತರ ಕಡೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಗಾಳಿ, ಸಿಡಿಲು ಸಹಿತ ಸುರಿದ ಮಳೆ ತಂಪೆರೆದಿದೆ. ಬೆಳ್ತಂಗಡಿಯ ಮದ್ದಡ್ಕದಲ್ಲಿ ಭಾರೀ ಗಾಳಿಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಸಂಚಾರಕ್ಕೆ ತೊಡಕಾಯಿತು.
Related Articles
ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಆಯನೂರಿನಲ್ಲಿ ರವಿವಾರ ಸಂಭವಿಸಿದೆ. ಶಿವಮೊಗ್ಗ ಅಣ್ಣಾನಗರದ ನಿವಾಸಿ ಆದಿಲ್ ಮೃತ ಯುವಕ. ಮಳೆಯಿಂದ ಶುಂಠಿ ರಕ್ಷಿಸಲೆಂದು ಟಾರ್ಪಲ್ ಮುಚ್ಚಲು ಕಣಕ್ಕೆ ತೆರಳಿದ್ದ ಆದಿಲ್ ಸಿಡಿಲಾಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement