Advertisement

ದೆಹಲಿ ಪೊಲೀಸರ ವಶಕ್ಕೆ ತಾಹಿರ್‌ ಹುಸೇನ್‌

09:58 AM Mar 06, 2020 | Sriram |

ನವದೆಹಲಿ: ತಲೆಮರೆಸಿಕೊಂಡಿದ್ದ ಆಮ್‌ ಆದ್ಮಿ ಪಾರ್ಟಿಯ ಉಚ್ಚಾಟಿತ ನಾಯಕ ತಾಹಿರ್‌ ಹುಸೇನ್‌ರನ್ನು ದೆಹಲಿ ಪೊಲೀಸರು ಗುರವಾರ ಬಂಧಿಸಿದ್ದಾರೆ.

Advertisement

ಗುಪ್ತಚರ ಇಲಾಖೆಯ ಸಿಬ್ಬಂದಿ ಅಂಕಿತ್‌ ಶರ್ಮಾರ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ತಾಹಿರ್‌, ಗುರುವಾರ ನ್ಯಾಯಾಲಯದ ಮುಂದೆ ಹಾಜರಾಗಿ ತಾವು ಕೋರ್ಟ್‌ ಸಮ್ಮುಖದಲ್ಲಿ ಶರಣಾಗುವುದಾಗಿ ಕೇಳಿಕೊಂಡಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಹೆಚ್ಚುವರಿ ಮೆಟ್ರೋಪಾಲಿಟನ್‌ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ವಿಶಾಲ್‌ ಪಹುಜಾ, ಅರ್ಜಿಯನ್ನು ವಜಾಗೊಳಿಸಿದರು. ಈ ಹಿನ್ನೆಲೆಯಲ್ಲಿ, ಪೊಲೀಸರು ತಾಹಿರ್‌ರನ್ನು ಬಂಧಿಸಿದ್ದಾರೆ.

ಅರ್ಜಿ ವಜಾ ಆಗಿದ್ದೇಕೆ?: ಪ್ರಕರಣ ಜರುಗಿರುವುದು ದಯಾಳ್‌ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ. ಹಾಗಾಗಿ, ತಾಹಿರ್‌, ಕರ್ಕಾಡೂಮ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಹಾಗಾಗಿ, ತಾಂತ್ರಿಕವಾಗಿ ಈ ಅರ್ಜಿ ಮೆಟ್ರೋಪಾಲಿಟನ್‌ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾ. ವಿಶಾಲ್‌ ಅರ್ಜಿ ತಿರಸ್ಕರಿಸಿದ್ದಾರೆ. ಈ ನಡುವೆ, ತಮ್ಮ ಜೀವಕ್ಕೆ ಅಪಾಯವಿರುವುದರಿಂದ ಕರ್ಕಾಡೂಮ ನ್ಯಾಯಾಲಯದ ಬದಲು ಮೆಟ್ರೋಪಾಲಿಟನ್‌ ಕೋರ್ಟ್‌ ಮುಂದೆ ಶರಣಾಗಲು ಅವಕಾಶ ನೀಡುವಂತೆ ತಾಹಿರ್‌ ಕೋರಿದ್ದೂ ವ್ಯರ್ಥವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next