ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಇಳಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಜೂನ್ 7ರಿಂದ ಅಂಗಡಿ, ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗುವುದು, ಆದರೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ(ಜೂನ್ 05) ತಿಳಿಸಿದ್ದಾರೆ.
ಇದನ್ನೂ ಓದಿ:ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ಹಣ ರಿಲೀಸ್ ಮಾಡಿದ್ದೇವೆ : ಯಡಿಯೂರಪ್ಪ
ಜೂನ್ 7ರಿಂದ ಮಾಲ್ ಗಳು ಹಾಗೂ ಅಂಗಡಿಗಳು ಪುನರಾರಂಭಗೊಳ್ಳಲಿದೆ. ಅಲ್ಲದೇ ಶೇ.50ರಷ್ಟು ಸಾಮರ್ಥ್ಯದೊಂದಿಗೆ ದೆಹಲಿ ಮೆಟ್ರೋ ಕೂಡಾ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು. ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನ್ನು ಹೆಚ್ಚು ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಮೂಲಕ ಇತರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದರು.
ಸಮ-ಬೆಸ ಆಧಾರದಲ್ಲಿ ಮಾರುಕಟ್ಟೆ ಮತ್ತು ಮಾಲ್ಸ್ ಗಳನ್ನು ತೆರೆಯಲು ಅನುವು ಮಾಡಿಕೊಡಲಾಗುವುದು ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.ಖಾಸಗಿ ಕಚೇರಿಗಳಲ್ಲಿಯೂ ಶೇ.50ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವನಿಸಲು ಅವಕಾಶ ನೀಡಲಾಗುವುದು ಎಂದು ವಿವರ ನೀಡಿದ್ದಾರೆ.
ದೆಹಲಿ ಸರ್ಕಾರ ಮುಂಬರು 3ನೇ ಅಲೆಯನ್ನು ತಡೆಗಟ್ಟಲು ಕೂಡಾ ಸಿದ್ಧವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.ಒಂದು ವೇಳೆ ಹೊಸ ರೂಪಾಂತರ ತಳಿ ಪತ್ತೆಯಾದರೆ ಅದರ ಬಗ್ಗೆ ಪರಿಶೀಲನೆ ನಡೆಸಲು ಲ್ಯಾಪ್ ಅನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.