Advertisement

AAP vs BJP; ದೆಹಲಿ ಎಂಸಿಡಿಯಲ್ಲಿ ಮತ್ತೆ ಕೋಲಾಹಲ

07:15 PM Jan 15, 2024 | Team Udayavani |

ಹೊಸದಿಲ್ಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಸೋಮವಾರ ಬಿಜೆಪಿ ಕೌನ್ಸಿಲರ್‌ಗಳು ಒತ್ತಾಯಿಸಿದ ಬೆನ್ನಲ್ಲೇ ಮತ್ತೆ ಭಾರಿ ಕೋಲಾಹಲ ಉಂಟಾಗಿದೆ.

Advertisement

ಪ್ರತಿಪಕ್ಷ ಬಿಜೆಪಿ ಕೌನ್ಸಿಲರ್‌ಗಳು ಸದನದ ಮಧ್ಯಭಾಗಕ್ಕೆ ಬಂದು ಮೇಯರ್ ಶೆಲ್ಲಿ ಒಬೆರಾಯ್ ಅವರ ಟೇಬಲ್ ಮೇಲೆ ಹತ್ತಿ ಕಾಗದಗಳನ್ನು ಹರಿದು ಹಾಕಿದರು. ಆ ಬಳಿಕ ತೀವ್ರ ಕೋಲಾಹಲ ಮತ್ತು ಗದ್ದಲ ಉಂಟಾಯಿತು. ಬಿಜೆಪಿ ಕೌನ್ಸಿಲರ್‌ಗಳ ಗದ್ದಲದ ನಡುವೆ ಎಂಸಿಡಿ ಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ.

ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಮಾತನಾಡಿ “ಎರಡು ಬಾರಿ ಅಧಿವೇಶನ ಪ್ರಾರಂಭವಾಗಲಿಲ್ಲ, ಇದಕ್ಕೆ ಬಿಜೆಪಿ ಕೌನ್ಸಿಲರ್‌ಗಳು ಕಾರಣ, ಅವರು ಕಳೆದ ವರ್ಷ ಜನವರಿಯಿಂದ ಮಾಡುತ್ತಿರುವ ಗೂಂಡಾಗಿರಿಯನ್ನು ಇಂದು ಕೂಡ ಮಾಡಿದ್ದಾರೆ. ನಾವು ಇಂದು ಅಧಿವೇಶನದಲ್ಲಿ 2 ಪ್ರಸ್ತಾಪಗಳನ್ನು ಇರಿಸಿದ್ದೇವೆ , ಒಂದು ಡಿ-ಸೀಲಿಂಗ್ ಆಗಿದ್ದು, 6 ತಿಂಗಳಿಂದ ಸೀಲ್ ಮಾಡಿರುವ ಅಂಗಡಿಗಳು ಮತ್ತು ಎರಡನೆಯದು ಸ್ಥಾಯಿ ಸಮಿತಿ ರಚನೆಯಾಗುವವರೆಗೆ ಸ್ಥಾಯಿ ಸಮಿತಿಯ ಅಧಿಕಾರವನ್ನು ಸದನಕ್ಕೆ ನೀಡಲಾಗುವುದು. ನಾವು ಸ್ಥಾಯಿ ಸಮಿತಿಯನ್ನು ರಚಿಸಲು ಬಯಸುತ್ತೇವೆ ಆದರೆ ನಾವು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ ಬಿಜೆಪಿಯ ಗದ್ದಲದ ನಡುವೆಯೇ ನಾವು ಈ ಎರಡೂ ಪ್ರಸ್ತಾಪಗಳನ್ನು ಅಂಗೀಕರಿಸಿದ್ದೇವೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next