Advertisement

ಮರ್ಯಾದೆಗಾಗಿ ಡೆಲ್ಲಿ-ಪಂಜಾಬ್‌ ಹೋರಾಟ

03:41 PM Apr 30, 2017 | |

ಮೊಹಾಲಿ: ಗೆಲುವಿಗಿಂತ ಸೋಲಿನ ಕಹಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಉಂಡಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳು ಐಪಿಎಲ್‌ನ ಭಾನುವಾರದ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.

Advertisement

ಡೆಲ್ಲಿ ತಂಡಕ್ಕೆ ಹೋಲಿಸಿದರೆ ಪಂಜಾಬ್‌ ತಂಡ ತುಸು ಮೇಲ್ಮಟ್ಟದಲ್ಲಿದೆ. ಡೆಲ್ಲಿ ತಾನಾಡಿರುವ 7 ಪಂದ್ಯದಲ್ಲಿ ಕೇವಲ 2 ಜಯ, 5 ಸೋಲಿನಿಂದ 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ದೇಶದ ಯುವ ಆಟಗಾರರಾದ ಶ್ರೇಯಸ್‌ ಐಯ್ಯರ್‌, ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌ಇವರ ಜತೆಗೆ ವಿದೇಶ ಆಟಗಾರರಾದ ಕ್ರಿಸ್‌ ಮಾರಿಸ್‌, ಕ್ಯಾಗಿಸೊ ರಬಾಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇವರ ಆಟ ತಂಡಕ್ಕೆ ಗೆಲುವಾಗಿ ಪರಿವರ್ತನೆಯಾಗುತ್ತಿಲ್ಲ.

ಅತ್ತ ಪಂಜಾಬ್‌ ತಂಡದ ಕಥೆಯೂ ಅಷ್ಟೇ. ತಾನಾಡಿರುವ 8 ಪಂದ್ಯದಲ್ಲಿ 3 ಜಯ, 5 ಸೋಲುಗಳಿಂದ 6 ಅಂಕ ಸಂಪಾದಿಸಿದೆ. ತಂಡದಲ್ಲಿ ಮಾರ್ಗನ್‌, ಮ್ಯಾಕ್ಸ್‌ವೆಲ್‌, ಆಮ್ಲ…

ಅವರಂತಹದ ದಿಗ್ಗಜ ಆಟಗಾರರಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಬೌಲಿಂಗ್‌ ವಿಭಾಗ ಸಂಪೂರ್ಣ ಕಳಪೆಯಾಗಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಈ ಐಪಿಎಲ್‌ ಆವೃತ್ತಿಯ ಮೊದಲ ಪಂದ್ಯದಲ್ಲಿ ಪಂಜಾಬ್‌ 97 ರನ್‌ಗಳಿಂದ ಡೆಲ್ಲಿ ವಿರುದ್ಧ ಭಾರೀ ಸೋಲುಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next