Advertisement

ದೆಹಲಿ ಪೊಲೀಸ್ ಅಧಿಕಾರಿಯ ಈ ಫೋಟೊ ವೈರಲ್..ದಿಢೀರ್ ವರ್ಗಾವಣೆ!

02:57 PM Jul 23, 2018 | Team Udayavani |

ನವದೆಹಲಿ: ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸ್ವಯಂಘೋಷಿತ ದೇವ ಮಹಿಳೆಯೊಬ್ಬರು ಅಧಿಕಾರಿಯ ತಲೆಮೇಲೆ ಕೈ ಇಟ್ಟು ಆಶೀರ್ವದಿಸುತ್ತಿರುವ ಫೋಟೋ ವೈರಲ್ ಆದ ಬಳಿಕ ವರ್ಗಾವಣೆ ಮಾಡಿರುವ ಘಟನೆ ನಡೆದಿದೆ.

Advertisement

ನವದೆಹಲಿಯ ಜನಕ್ ಪುರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಇಂದ್ರಪಾಲ್ ಅವರನ್ನು ಇಲಾಖೆ ವರ್ಗಾವಣೆಗೊಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಸ್ವಯಂ ಘೋಷಿತ ದೇವ ಮಹಿಳೆ ನಮಿತಾ ಆಚಾರ್ಯ ಎಂಬಾಕೆ ಮುಂಭಾಗದಲ್ಲಿ ಯೂನಿಫಾರ್ಮ್ ಧರಿಸಿ ಠಾಣಾಧಿಕಾರಿ ಇಂದ್ರಪಾಲ್ ಕುಳಿತಿದ್ದರು. ದೇವ ಮಹಿಳೆ ನಮಿತಾ ಅವರು ಇಂದ್ರಪಾಲ್ ಅವರ ತಲೆಮೇಲೆ ಇರಿಸಿ ಆಶೀರ್ವದಿಸುತ್ತಿರುವ ಪೋಟೋ ವೈರಲ್ ಆಗಿತ್ತು.

ನಮಿತಾ ಆಚಾರ್ಯ ಪ್ರಭಾವಿ ಸ್ವಯಂಘೋಷಿತ ದೇವ ಮಹಿಳೆ ಎಂದು ವರದಿ ವಿವರಿಸಿದ್ದು, ಈ ಹಿಂದೆಯೂ ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಜೊತೆ ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next