Advertisement

ದಿಲ್ಲಿ ಬಸ್ಸಿನಲ್ಲಿ ಹಸ್ತಮೈಥುನ: ಮಾಹಿತಿ ನೀಡುವವರಿಗೆ ಇನಾಮು

10:51 AM Feb 17, 2018 | udayavani editorial |

ಹೊಸದಿಲ್ಲಿ : ದಿಲ್ಲಿ ವಿವಿ ವಿದ್ಯಾರ್ಥಿನಿ ಪಕ್ಕ ಬಸ್ಸಿನಲ್ಲಿ ಕೂತು ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಂಡು ಆಕೆಯ ಸೊಟ್ಟವನ್ನು ಸ್ಪರ್ಶಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಇನಾಮು ಕೊಡುವುದಾಗಿ ದಿಲ್ಲಿ ಪೊಲೀಸರು ಘೋಷಿಸಿದ್ದಾರೆ. 

Advertisement

ಹುಡುಗಿಯ ಎದುರು ಬಸ್ಸಿನಲ್ಲಿ ಹಸ್ತ ಮೈಥುನ ಮಾಡಿಕೊಂಡ ವ್ಯಕ್ತಿಯ ವಿರುದ್ಧ ದಿಲ್ಲಿಯ ವಸಂತ ವಿಹಾರ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ತಮ್ಮ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

ಆರೋಪಿ ವ್ಯಕ್ತಿಯ ಮಾಹಿತಿ ನೀಡುವವರ ಗುರುತು ವಿವರಗಳನ್ನು ರಹಸ್ಯವಾಗಿ ಇರಿಸಲಾಗುವುದು ಎಂದು ಪೊಲೀಸ್‌ ಪ್ರಕಟನೆ ತಿಳಿಸಿದೆ.

ದಿಲ್ಲಿಯ ಜನದಟ್ಟನೆಯ ಬಸ್ಸಿನಲ್ಲಿ  ಆರೋಪಿ ವಿಕೃತ ಕಾಮಿಯು ನಡೆಸಿದ್ದ ಕೃತ್ಯಗಳನ್ನು ಸಂತ್ರಸ್ತೆ ದಿಲ್ಲಿ ವಿವಿ ವಿದ್ಯಾರ್ಥಿನಿ ತನ್ನ ಮೊಬೈಲ್‌ ಕ್ಯಾಮೆರಾದಲ್ಲಿ ದಾಖಲಿಸಿಕೊಂಡಿದ್ದಳು. 

Advertisement

ಬಸ್ಸಿನಲ್ಲಿ ತಾನು ವ್ಯಕ್ತಿಯ ವಿರುದ್ಧ ಕೂಗಾಡಿದ್ದಾಗ ಆ ವ್ಯಕ್ತಿಯು “ನಿನಗೆ ತೊಂದರೆ ಆಗುವುದಿದ್ದರೆ ನೀನು ಬಸ್ಸಿನಿಂದ ಇಳಿದು ಹೋಗು’ ಎಂದು ತನ್ನ  ಲೈಂಗಿಕ ಕೀಟಲೆ ಕೃತ್ಯವನ್ನು ಮುಂದುವರಿಸಿದ್ದ. ತಾನು ಎಷ್ಟೇ ಎಗರಾಡಿದರೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾರೂ ನೆರವಿಗೆ ಬಾರಿಗೆ ತಮ್ಮ ಪಾಡಿಗೆ ತಾವಿದ್ದರು ಎಂದು ಸಂತ್ರಸ್ತ ವಿವಿ ವಿದ್ಯಾರ್ಥಿನಿ ದೂರಿನಲ್ಲಿ ಹೇಳಿದ್ದಾಳೆ. 

ಈ ಘಟನೆ ಫೆ.7ರಂದು ವಸಂತ ಗ್ರಾಮ ಮತ್ತು ಐಐಟಿ ಗೇಟ್‌ ನಡುವಿನ ಬಸ್‌ ಪ್ರಯಾಣದಲ್ಲಿ ಸಂಭವಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next