ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 2020ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸುವಲ್ಲಿ ದೆಹಲಿ ಪೊಲೀಸರು ದಯನೀಯವಾಗಿ ವಿಫಲರಾಗಿದ್ದಾರೆ ಎಂದು ಉಲ್ಲೇಖೀಸಿರುವ ನ್ಯಾಯಾಲಯವು, ಪೊಲೀಸರಿಗೆ 25 ಸಾವಿರ ರೂ. ದಂಡ ವಿಧಿಸಿದೆ.
ಕಾರ್ಕದೂìಮಾ ಕೋರ್ಟ್‌ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಹಿಂದಿನ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ದಂಡ ವಿಧಿಸಿದೆ.
ಗಲಭೆ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್ ಒಂದರಲ್ಲಿ ದೆಹಲಿ ಪೊಲೀಸರು ತನಿಖೆಯನ್ನು “ಅತ್ಯಂತ ಸಾಂದರ್ಭಿಕ, ನಿರ್ದಯ ಮತ್ತು ವಿಡಂಬನಾತ್ಮಕ ರೀತಿಯಲ್ಲಿ’ ನಡೆಸಿದ್ದಾರೆ ಎಂದು ಕೋರ್ಟ್ ಹೇಳಿದೆ. ಜತೆಗೆ, ಗಲಭೆ ವೇಳೆ ಗಾಯಗೊಂಡ ಮೊಹಮದ್ ನಾಸಿರ್ ಎಂಬವರ ದೂರಿಗೆ ಸಂಬಂಧಿಸಿ ಪ್ರತ್ಯೇಕ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ : ಅಗ್ನಿಶಾಮಕ ಠಾಣಾಧಿಕಾರಿ ರಾಜುಗೆ ಸಿಎಂ ಚಿನ್ನದ ಪದಕ
2020ರ ಫೆ. 20ರಂದು ದೆಹಲಿಯ ಜಫ್ರಾಬಾದ್‌ನಲ್ಲಿ ಕೋಮು ಗಲಭೆ ನಡೆದು, 58 ಮಂದಿ ಮೃತರಾಗಿ, 581 ಮಂದಿ ಗಾಯಗೊಂಡಿದ್ದರು. ಅಲ್ಲದೆ ಅನೇಕ ಅಂಗಡಿ-ಮುಂಗಟ್ಟುಗಳು, ಮನೆಗಳು ಸುಟ್ಟುಭಸ್ಮವಾಗಿದ್ದವು.