Advertisement

ಕನ್ಹಯ್ಯ ಕುಮಾರ್‌ ವಿರುದ್ಧ ದಿಲ್ಲಿ ಪೊಲೀಸರಿಂದ ಚಾರ್ಜ್‌ ಶೀಟ್‌

10:55 AM Jan 14, 2019 | udayavani editorial |

ಹೊಸದಿಲ್ಲಿ : 2016ರಲ್ಲಿ ದಾಖಲಾಗಿದ್ದ ದೇಶದ್ರೋಹದ ಕೇಸಿಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ್‌ ಮತ್ತು ಆತನ ಸಹವರ್ತಿಗಳ  ವಿರುದ್ದ ಇಂದು ಚಾರ್ಜ್‌ಶೀಟ್‌ ದಾಖಲಿಸಿದ್ದಾರೆ. 

Advertisement

ಇದೇ ಕೇಸಿನಲ್ಲಿ ಶಾಮೀಲಾಗಿದ್ದ ಜೆಎನ್‌ಯು ವಿದ್ಯಾರ್ಥಿ ಉಮರ್‌ ಖಾಲಿದ್‌ ಮತ್ತು ಅನಿರ್ಬನ್‌ ಭಟ್ಟಾಚಾರ್ಯ ವಿರುದ್ಧವೂ ಚಾರ್ಜ್‌ ಶೀಟ್‌ ದಾಖಲಾಗಿದೆ. ಇವರು 2016ರ ಫೆ.9ರಂದು ವಿವಿ ಕ್ಯಾಂಪಸ್‌ನಲ್ಲಿ ಭಾರತ ವಿರೋಧಿ ಘೊಷಣೆ ಕೂಗಿದ್ದರು. 

ಸಂಸತ್‌ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಅಫ್ಜಲ್‌ ಗುರು ವನ್ನು  ನೇಣಿಗೆ ಹಾಕಲಾದದುದರ ಸಂಸ್ಮರಣೆಗೆ ನಡೆದ ಕಾರ್ಯಕ್ರಮದಲ್ಲಿ  ಆರೋಪಿಗಳು ದೇಶ ವಿರೋಧಿ ಘೋಷಣೆ ಕೂಗಿದ್ದರು.

ಜಾರ್ಜ್‌ ಶೀಟ್‌ನಲ್ಲಿ ಹೆಸರಿಸಲಾಗಿರುವ ಕಾಶ್ಮೀರಿ  ವಿದ್ಯಾರ್ಥಿಗಳೆಂದರೆ ಆಕಿಬ್‌ ಹುಸೇನ್‌, ಮುಜೀಬ್‌ ಹುಸೇನ್‌, ಮುನೀಬ್‌ ಹುಸೇನ್‌, ಉಮರ್‌ ಗುಲ್‌, ರಯೀಯ ರಸೂಲ್‌, ಬಶೀರ್‌ ಭಟ್‌ ಮತ್ತು ಬಶಾರತ್‌. 

Advertisement

Udayavani is now on Telegram. Click here to join our channel and stay updated with the latest news.

Next