Advertisement

ದೇಶದ ಹೊಸ ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌ ಆಗಿ ಹೊರಹೊಮ್ಮಿದ ನವದೆಹಲಿ !

09:19 PM Jan 31, 2022 | Team Udayavani |

ನವದೆಹಲಿ: 2019ರ ಏಪ್ರಿಲ್‌ನಿಂದ 2021ರ ಡಿಸೆಂಬರ್‌ವರೆಗೆ ಸುಮಾರು 5000ಕ್ಕೂ ಅಧಿಕ ಸ್ಟಾರ್ಟ್‌ಅಪ್‌ ಆರಂಭಿಸುವ ಮೂಲಕ ರಾಷ್ಟ್ರ ರಾಜಧಾನಿ ನವದೆಹಲಿ, ದೇಶದ ಹೊಸ “ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌’ ಆಗಿ ಹೊರಹೊಮ್ಮಿದೆ.

Advertisement

ಈವರೆಗೆ ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 4,514 ಸ್ಟಾರ್ಟ್‌ಅಪ್‌ಗಳು ಆರಂಭವಾಗಿದ್ದು, ನಗರ ಅಗ್ರ ಸ್ಥಾನ ಕಳೆದುಕೊಂಡು ಎರಡನೇ ಸ್ಥಾನಕ್ಕಿಳಿದಿದೆ.

ದೇಶದಲ್ಲಿ ಒಟ್ಟಾರೆಯಾಗಿ 61,400 ಸ್ಟಾರ್ಟ್‌ಅಪ್‌ಗಳಿವೆ. ಅದರಲ್ಲಿ ಅತಿ ಹೆಚ್ಚು ಅಂದರೆ 11,308 ಸ್ಟಾರ್ಟ್‌ಅಪ್‌ಗಳು ಮಹಾರಾಷ್ಟ್ರದಲ್ಲೇ ಇವೆ. ಈ ಎಲ್ಲ ಅಂಶಗಳು ಸೋಮವಾರ ಬಿಡುಗಡೆಯಾದ 2021-22ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next