Advertisement

ರೈತರ ಬೃಹತ್‌ ರಾಲಿಯಿಂದ ಮುಚ್ಚಲ್ಪಟ್ಟ ದಿಲ್ಲಿ-ನೋಯ್ಡಾ ಫ್ಲೈ ವೇ

01:55 PM Feb 01, 2019 | udayavani editorial |

ಹೊಸದಿಲ್ಲಿ : ರೈತರ ಬೃಹತ್‌ ರಾಲಿಯ ಕಾರಣ ಇಂದು ಶುಕ್ರವಾರ ಅತ್ಯಂತ ವಾಹನ ದಟ್ಟನೆಯ ದಿಲ್ಲಿ ಮತ್ತು ನೋಯ್ಡಾ ನಡುವಿನ ದಿಲ್ಲಿ – ನೋಯ್ಡಾ ಫ್ಲೈ ವೇ ಯನ್ನು ಮುಚ್ಚಲಾಯಿತು ಎಂದು ದಿಲ್ಲಿ ಟ್ರಾಫಿಕ್‌ ಪೊಲೀಸ್‌ ತಿಳಿಸಿದ್ದಾರೆ. 

Advertisement

ರೈತರ ರಾಲಿಯ ಪರಿಣಾಮವಾಗಿ ಗಾಜೀಪುರದಿಂದ ಮಯೂರ್‌ ವಿಹಾರ್‌ ಆಗಿ ಹೋಗುವ ವಾಹನಗಳಿಗೆ ಟ್ರಾಫಿಕ್‌ ಪೊಲೀಸರು ಎನ್‌ಎಚ್‌ 9ರ ಮಾರ್ಗವನ್ನು ಹಿಡಿಯುವಂತೆ ಸೂಚಿಸಿದರು. 

ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ರೈತರ ರಾಲಿಯಿಂದಾಗಿ ದಿಲ್ಲಿ -ನೋಯ್ಡಾ ಫ್ಲೈ ವೇ ತೀವ್ರವಾಗಿ ಬಾಧಿತವಾಯಿತು ಎಂದು ದಿಲ್ಲಿ ಟ್ರಾಫಿಕ್‌ ಪೊಲೀಸರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next