Advertisement

2080-99ಕ್ಕೆ ತಾಪಮಾನ 5 ಡಿ.ಸೆ. ಹೆಚ್ಚಳ? ಇಂಗಾಲ ಹೊರಸೂಸುವಿಕೆ ದುಪ್ಪಟ್ಟಾದರೆ ಸಂಕಷ್ಟ ಖಚಿತ

06:54 PM May 13, 2022 | Team Udayavani |

ನವದೆಹಲಿ: ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಿರುವಾಗಲೇ ಗ್ರೀನ್‌ಪೀಸ್‌ ಇಂಡಿಯಾ ಹೇಳಿರುವ ಭವಿಷ್ಯವು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

Advertisement

2050ರ ವೇಳೆಗೆ ಜಾಗತಿಕ ಇಂಗಾಲ ಹೊರಸೂಸುವಿಕೆ ಪ್ರಮಾಣವೇನಾದರೂ ದುಪ್ಪಟ್ಟಾದರೆ, 2080-99ರ ಅವಧಿಯಲ್ಲಿ ದೆಹಲಿ ಮತ್ತು ಮುಂಬೈ ವಾರ್ಷಿಕ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಲಿದೆ ಎಂದು ಗ್ರೀನ್‌ಪೀಸ್‌ ಸಂಸ್ಥೆಯ ಉಷ್ಣಹವೆಯ ಮುನ್ಸೂಚನೆ ವರದಿ ಹೇಳಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್‌ಸರ್ಕಾರಿ ಸಮಿತಿಯ 6ನೇ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಗ್ರೀನ್‌ಪೀಸ್‌ ಈ ವರದಿ ತಯಾರಿಸಿದೆ.

2050ರ ವೇಳೆಗೆ ಜಾಗತಿಕ ಸಿಒ2(ಇಂಗಾಲ) ಹೊರಸೂಸುವಿಕೆ ದುಪ್ಪಟ್ಟಾಗಿದ್ದೇ ಆದಲ್ಲಿ, 2080-99ರ ಅವಧಿಯಲ್ಲಿನ ತಾಪಮಾನವು 1995-2015ರ ಅವಧಿಯಲ್ಲಿದ್ದಿದ್ದಕ್ಕಿಂತ 5 ಡಿ.ಸೆ.ನಷ್ಟು ಹೆಚ್ಚಳವಾಗಲಿದೆ. ದೆಹಲಿಯ ವಾರ್ಷಿಕ ಗರಿಷ್ಠ ತಾಪಮಾನ (1995 -2014ರ ಜೂನ್‌ ತಿಂಗಳ ಮಧ್ಯದಲ್ಲಿ) 41.93 ಡಿ.ಸೆ.ನಷ್ಟಿದ್ದು, 2080-99ರ ಅವಧಿಯಲ್ಲಿ ಅದು 45.97 ಡಿ.ಸೆ.ಗೆ ಏರಲಿದೆ. ಇದು ಕೆಲವೊಮ್ಮೆ 48.19 ಡಿ.ಸೆ.ವರೆಗೂ ಹೋಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next