ಮುಂಬೈ: ದೇಶಿಯ ಕ್ರಿಕಟ್ ಕೂಟ ರಣಜಿ ಕಪ್ ನಡೆಸಲು ಬಿಸಿಸಿಐ ತಯಾರಿ ನಡೆಸುತ್ತಿದೆ. ಕಳೆದ ಬಾರಿ ಕೋವಿಡ್ ಕಾರಣದಿಂದ ರದ್ದಾಗಿದ್ದ ಕೂಟವನ್ನು ಬಾರಿ ಯಶಸ್ವಿಯಾಗಿ ನಡೆಸಲು ಸಜ್ಜಾಗಿದೆ. 2022ರ ಜನವರಿ 5ರಿಂದ ಕೂಟ ಆರಂಭವಾಗಲಿದ್ದು, ತಂಡಗಳ ಗುಂಪು ಮಾಡಲಾಗಿದೆ.
ರಣಜಿ ಇತಿಹಾಸದ ಬಲಿಷ್ಠ ತಂಡಗಳಾದ ಕರ್ನಾಟಕ, ಮುಂಬೈ, ದೆಹಲಿ ತಂಡಗಳು ಈ ಬಾರಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎಲೈಟ್ ಗ್ರೂಪ್ ಸಿ ನಲ್ಲಿ ಈ ಮೂರು ಬಲಿಷ್ಠ ತಂಡಗಳ ಜೊತೆಗೆ ಹೈದರಾಬಾದ್, ಮಹಾರಾಷ್ಟ್ರ ಮತ್ತು ಉತ್ತರಾಖಂಡ್ ತಂಡಗಳಿವೆ.
ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವು ಡಿ ಗುಂಪಿನಲ್ಲಿದ್ದು, ಅದರಲ್ಲಿ ತಮಿಳುನಾಡು, ರೈಲ್ವೇಸ್, ಜಮ್ಮು ಕಾಶ್ಮೀರ, ಜಾರ್ಖಂಡ್ ಮತ್ತು ಗೋವಾ ತಂಡಗಳಿವೆ.
ಇದನ್ನೂ ಓದಿ:ಪ್ರೊ ಕಬಡ್ಡಿ ಹರಾಜು: ಪ್ರದೀಪ್ ನರ್ವಾಲ್‌ಗೆ ಇತಿಹಾಸದಲ್ಲೇ ಗರಿಷ್ಠ ಮೊತ್ತ
ಕಳೆದ ಬಾರಿಯ ದ್ವಿತೀಯ ಸ್ಥಾನಿ ಬೆಂಗಾಲ್ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ವಿದರ್ಭ, ಹರ್ಯಾಣ, ಕೇರಳ, ತ್ರಿಪುರ ಮತ್ತು ರಾಜಸ್ಥಾನ ತಂಡಗಳಿವೆ. ಎಲೈಟ್ ಎ ಗ್ರೂಪ್ ನಲ್ಲಿ ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಅಸ್ಸಾಮ್ ಮತ್ತು ಸರ್ವಿಸಸ್ ತಂಡಗಳು ಸ್ಥಾನ ಪಡೆದಿದೆ.
ಎಲೈಟ್ ಇ ಗುಂಪಿನಲ್ಲಿ ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಬರೋಡಾ, ಒಡಿಶಾ ಮತ್ತು ಪುದುಚೇರಿ ತಂಡಗಳಿವೆ. ಪ್ಲೇಟ್ ಗ್ರೂಪ್ ನಲ್ಲಿ ಚಂಡೀಗಢ, ಮೇಘಾಲಯ, ಬಿಹಾರ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ತಂಡಗಳಿವೆ.