Advertisement

ಫಲಿತಾಂಶ ಪ್ರಕಟ: ಅಸಿಸ್ಟೆಂಟ್ ಪ್ರೊಫೆಸರ್ ಶೆಲ್ಲಿ ದೆಹಲಿ ನೂತನ ಮೇಯರ್, ಬಿಜೆಪಿಗೆ ಸೋಲು

02:58 PM Feb 22, 2023 | Team Udayavani |

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಬಹುಮತ ಪಡೆದಿದ್ದು, ಇದರ ಪರಿಣಾಮ ಆಪ್ ಅಭ್ಯರ್ಥಿ ಶೆಲ್ಲಿ ಓಬೆರಾಯ್ ದೆಹಲಿಯ ನೂತನ ಮೇಯರ್ ಆಗಿ ಬುಧವಾರ (ಫೆ,22) ಆಯ್ಕೆಯಾಗಿದ್ದಾರೆ.

Advertisement

ಇದನ್ನೂ ಓದಿ:“ಕಾಂತಾರ 2′ ರಲ್ಲಿ ರಜಿನಿಕಾಂತ್ ನಟನೆ?

ಆಮ್ ಆದ್ಮಿ ಪಕ್ಷದ ಶೆಲ್ಲಿ ಓಬೇರಾಯ್ ಗೆ 150 ಮತಗಳು ಬಿದ್ದಿದ್ದು, ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ 116 ಮತ ಗಳಿಸಿರುವುದಾಗಿ ವರದಿ ತಿಳಿಸಿದೆ. ನೂತನ ಮೇಯರ್ ಆಗಿ ಆಯ್ಕೆಯಾದ ಓಬೇರಾಯ್ ಗೆ ಆಪ್ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ದೆಹಲಿ ಡೆಪ್ಯುಟಿ ಸಿಎಂ ಮನೀಶ್ ಸಿಸೋಡಿಯಾ ಟ್ವೀಟರ್ ನಲ್ಲಿ ಶೆಲ್ಲಿಗೆ ಅಭಿನಂದನೆ ತಿಳಿಸಿದ್ದು, ಗೂಂಡಾಗಳು ಪರಾಜಯಗೊಂಡಿದ್ದು, ದೆಹಲಿ ಜನತೆ ಗೆಲುವು ಸಾಧಿಸಿದ್ದಾರೆ. ಆಪ್ ಮೇಯರ್ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆಪ್ ನ ಮೊದಲ ಮೇಯರ್ ಆಗಿ ಶೆಲ್ಲಿ ಓಬೇರಾಯ್ ಆಯ್ಕೆಯಾಗಿದ್ದು, ಮತ್ತೊಮ್ಮೆ ದೆಹಲಿ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಯಾರೀಕೆ ಶೆಲ್ಲಿ ಓಬೇರಾಯ್?

Advertisement

ಶೆಲ್ಲಿ ಓಬೇರಾಯ್ ಉನ್ನತ ಶಿಕ್ಷಣ ಪಡೆದಿದ್ದು, ಪ್ರಸ್ತುತ ದೆಹಲಿ ಯೂನಿರ್ವಸಿಟಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಪ್ರತಿಷ್ಠಿತ ಸೆಮಿನಾರ್ ಗಳಲ್ಲಿ ಭಾಗಿಯಾಗಿರುವ ಶೆಲ್ಲಿ ಅವರ ಸಂಶೋಧನಾ ವರದಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಜರ್ನಲ್ಸ್ ಗಳಲ್ಲಿ ಪ್ರಕಟವಾಗಿದೆ.

ಶೆಲ್ಲಿ ಅವರು ಇಂಡಿಯನ್ ಕಾಮರ್ಸ್ ಅಸೋಸಿಯೇಶನ್ ಅಜೀವ ಸದಸ್ಯರಾಗಿದ್ದಾರೆ. ತಮ್ಮ ಅತ್ಯುತ್ತಮ ಸಂಶೋಧನಾ ಪೇಪರ್ಸ್ ಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ್ದು, ಐಸಿಎ ಸಮ್ಮೇಳನದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಮೇಯರ್ ಆಯ್ಕೆ ಜಟಾಪಟಿ:

ದೆಹಲಿ ಮೇಯರ್ ಆಯ್ಕೆಗಾಗಿ ಸಾಕಷ್ಟು ರಾಜಕೀಯ ಕಸರತ್ತು ನಡೆದಿದ್ದು, ಮೂರು ಬಾರಿ ಮೇಯರ್ ಆಯ್ಕೆ ಚುನಾವಣೆ ಮುಂದೂಡಲ್ಪಟ್ಟಿತ್ತು. ಕೊನೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ ಇಂದು ಚುನಾವಣೆ ನಡೆದಿತ್ತು. ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಬುಧವಾರ ಬಿಗಿ ಬಂದೋಬಸ್ತ್ ನಲ್ಲಿ ದೆಹಲಿ ಮೇಯರ್ ಆಯ್ಕೆ ಚುನಾವಣೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next