Advertisement

ಮತ್ತೊಂದು ವಾರ ಲಾಕ್ ಡೌನ್ ಮುಂದುವರೆಸಿದ ದೆಹಲಿ ಸರ್ಕಾರ!

02:35 PM May 23, 2021 | Team Udayavani |

ನವದೆಹಲಿ : ಕೋವಿಡ್ 19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಲಾಕ್​ ಡೌನ್ ಮತ್ತೊಂದು ವಾರ ವಿಸ್ತರಣೆ ಮಾಡಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.

Advertisement

ಕೋವಿಡ್ ಸೋಂಕನ್ನ ಮತ್ತಷ್ಟು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಜ್ರಿವಾಲ್ ಸರ್ಕಾರ ಲಾಕ್​ಡೌನ್ ವಿಸ್ತರಿಸಲು ನಿರ್ಧರಿಸಿದೆ. ಮುಂದಿನ ಸೋಮವಾರ ಅಂದ್ರೆ ಮಾರ್ಚ್ 31ರ ಬೆಳಗ್ಗೆವರೆಗೆ ಲಾಕ್​ಡೌನ್ ಮುಂದುವರಿಯಲಿದೆ. ಒಂದು ವೇಳೆ ಅಷ್ಟರೊಳಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ ಮುಂದಿನ ಮಂಗಳವಾರದಿಂದ ಲಾಕ್ ​ಡೌನ್​ ಸಡಿಲಗೊಳಿಸುವ ಯೋಚನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದು ಮಾಹಿತಿ ನೀಡಿರುವ ಅವರು, ದೆಹಲಿಯಲ್ಲಿ ಮೇ 31ರವರೆಗೆ ಕೋವಿಡ್  ಲಾಕ್​ಡೌನ್ ಮುಂದುವರಿಯಲಿದೆ. ಒಂದು ವೇಳೆ ಸೋಂಕಿನ ಪ್ರಮಾಣ ಕಡಿಮೆಯಾಗಿದ್ರೆ, ಲಾಕ್​ಡೌನ್​ನಲ್ಲಿ ಹಂತಹಂತವಾಗಿ ಸಡಿಲಿಕೆ ಮಾಡಲಾಗುವುದು ಅಂತಾ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next