ಮುಂಬಯಿ: ಕನ್ನಡದ ಒಂದು ಕೃತಿ ಪ್ರಕಟವಾದಾಗ ಅದರ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾದರೆ, ಅದನ್ನು ಕೊಂಡು ಓದುವುದು ಕನ್ನಡಿಗರಾದ ನಮ್ಮ ಕರ್ತವ್ಯ ಎಂದು ದೆಹಲಿ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದರು.
ದೆಹಲಿ ಕರ್ನಾಟಕ ಸಂಘ ಆ. 26 ರಂದು ಆಯೋಜಿಸಿದ್ದ ಪಂಕಜ್ ಸೇಖ್‌ಸರಿಯಾಅವರ ‘ಕೊನೆಯ ಅಲೆ’ ಕಾದಂಬರಿಯನ್ನು ಬಿಡುಗಡೆಮಾಡಿ ಮಾತನಾಡಿದ ಅವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಗ್ಗೆ ಕನ್ನಡದಲ್ಲಿ ಈಗಾಗಲೇ ಮೂರು ಕೃತಿಗಳು ಬಂದಿವೆ. ಆದರೆ ಪ್ರಸ್ತುತ “ಕೊನೆಯ ಅಲೆ’ ಇದು ಮೊದಲ ಎರಡು ಕೃತಿಗಳಿಗಿಂದ ತುಂಬ ಬೇರೆಯಾಗಿದ್ದು, ಇದು ಅಂಡಮಾನ್ ದ್ವೀಪದ ಆತ್ಮಕ್ಕೆ ಇಳಿಯುತ್ತದೆ. ಇವತ್ತು ಅಂಡಮಾನಿನಾದ್ಯಂತ ಕಾಣಸಿಗುವ ಪ್ರವಾಸಿಗರು, ವಸಾಹತು ಕಾಲದಲ್ಲಿ ಅಲ್ಲಿಯೇ ಹುಟ್ಟಿ ಬೆಳೆದ ಸ್ಥಳೀಯ ಜನರು ಮತ್ತು ಸಾವಿರಾರು ವರ್ಷಗಳಿಂದ ಅಲ್ಲಿಯೇ ಬದುಕಿದ್ದು, ಪ್ರಾಚೀನ ಶಿಲಾಯುಗದ ಜೀವನ ವಿಧಾನವನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಜರವಾ ಬುಡಕಟ್ಟು-ಈ ಮೂರೂ ಜನ ಸಮುದಾಯಗಳ ನಡುವಣ ಸಂಘರ್ಷ ಮತ್ತು ಸಮನ್ವಯವನ್ನು ಈ ಕೃತಿ ಸೂಕ್ಷ್ಮವಾಗಿ ದಾಖಲಿಸುತ್ತದೆ ಎಂದರು.
ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್‌ಅವರು ನಾನು ಈ ಕೃತಿಯನ್ನು ಓದಿಲ್ಲ, ಡಾ| ಬಿಳಿಮಲೆ ಅವರು ಹೇಳಿದ ಮಾತಿನಿಂದ ಈ ಕೃತಿಯನ್ನು ಓದಬೇಕನ್ನಿಸುತ್ತದೆ, ಕಾರಣ ಒಂದು ಸƒಜನಾತ್ಮಕತೆ ಅದರಲ್ಲಿದೆ. ಅದು ಭಾಷಾಂತರವಾಗಿ ಬಂದಿದ್ದರಿಂದ. ಭಾಷಾಂತರದಲ್ಲಿ ನನಗೆ ತುಂಬಾ ಆಸಕ್ತಿ ಇರುವುದರಿಂದ ನನಗೆ ಈ ಎರಡೂ ಕೃತಿಯನ್ನು ಓದುವಂತಹ ಆಸೆಯಾಗಿದೆ ಎಂದರು.
ಕೃತಿ ಬಿಡುಗಡೆ ಮಾಡಲು ಅನುವು ಮಾಡಿಕೊಟ್ಟ ದೆಹಲಿ ಕರ್ನಾಟಕ ಸಂಘ ಮತ್ತು ಕನ್ನಡಿಗರೆಲ್ಲರಿಗೂ ದಿ ಲಾಸ್ಟ್ ವೇವ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಸುಮಂಗಲಾ ಎಸ್. ಮುಮ್ಮುಗಟ್ಟಿ ಅವರಿಗೂ ಪಂಕಜ್ ಸೇಖ್‌ಸರಿಯಾ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಸಂಘದ ಜತೆ ಕಾರ್ಯದರ್ಶಿ ಟಿ. ಪಿ. ಬೆಳ್ಳಿಯಪ್ಪ ವಂದಿಸಿದರು.
ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ| ಎಂ. ಎಸ್. ಶಶಿಕುಮಾರ್ ಅವರು ನಿರೂಪಿಸಿದರು. ಸಂಘದ ಕೋಶಾಧಿಕಾರಿ ಕೆ. ಎಸ್. ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಮಿಣಿ ಹಂಡೆ ಅವರಿಂದ “ಶ್ರೀಕೃಷ್ಣ ಲೀಲೆ’ ಹರಿಕಥಾ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಸುಧೀರ್ ಫಡ್ನಿàಸ್, ಹಾರ್ಮೋನಿಯಂನಲ್ಲಿ ಅಶ್ವಿನಿ ಕುಮಾರ್, ವಯೋಲಿನ್‌ನಲ್ಲಿ ಶುಭಾದೇವಿ ಪ್ರಸಾದ್ ಅವರು ಸಹಕರಿಸಿದರು.