Advertisement
ಗಂಧರ್ವ ದೆಹಲಿ ಕರ್ನಾಟಕ ಸಂಘದಿಂದ ಚಿಗುರಿದ ಮೊಳಕೆ, ದೆಹಲಿ ಕರ್ನಾಟಕ ಸಂಘವು ಸುಮಾರು 5-6 ವರ್ಷಗಳಿಂದ ತಾಯಿ ಸ್ಥಾನದಲ್ಲಿ ನಿಂತು ಕಲಾವಿದರನ್ನು ಪೋಷಿಸಿ ಬೆಳೆಸುತ್ತಿದೆ. ಎಷ್ಟೋ ಜನರು ಈ ವೇದಿಕೆಯಿಂದ ಕಲಾವಿದರಾಗಿದ್ದಾರೆ, ಇದಕ್ಕೆ ಮೂಲ ಕಾರಣ ದೆಹಲಿ ಕರ್ನಾಟಕ ಸಂಘ. ನೃತ್ಯತರಬೇತಿ, ಸಂಗೀತ ತರಬೇತಿ, ನಾಟಕ ತರಬೇತಿಯನ್ನು ಕರ್ನಾಟಕ ಸಂಘದಿಂದ ಪಡೆದು ಒಂದೇ ವೇದಿಕೆ ಮೇಲೆ 150ಕ್ಕೂ ಹೆಚ್ಚು ಕಲಾವಿದರು ಹಾಡಿ ಕುಣಿದಿದ್ದಾರೆ. ಖ್ಯಾತ ಕಲಾವಿದರಾದ ಹಂಸಲೇಖ, ಟಿ. ಎಸ್. ನಾಗಾಭರಣ, ಬಿ. ಕೆ. ಸುಮಿತ್ರಾ ಇವರೆಲ್ಲರ ತರಬೇತಿ ಪಡೆದು ಈ ಗಂಧರ್ವ ತಂಡ, ಗಾನ ಗಂಧರ್ವ ತಂಡವಾಗಿದೆ. ಇದೇ ರೀತಿಯಲ್ಲಿ ಇನ್ನೂ ಅನೇಕ ತಂಡಗಳು ಈ ವೇದಿಕೆ ಮೂಲಕ ಪ್ರಖ್ಯಾತಿ ಪಡೆಯುತ್ತಿವೆ, ಬೆಳೆಯುತ್ತಿವೆ. ಇದಕ್ಕೆಲ್ಲಾ ಮೂಲ ಕಾರಣ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ಅವರು ಮತ್ತು ಪದಾಧಿಕಾರಿಗಳು.
Related Articles
Advertisement
ಮುಖ್ಯ ಅತಿಥಿಗಳಾಗಿ ದೆಹಲಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ರಂಗನಾಥ ಸಿಂಗಾರಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ, ಕರ್ನಾಟಕ ಸಂಗೀತ ವಿದ್ವಾಂಸರಾದ ಪಂಡಿತ್ ಲೋಕನಾಥ ಶರ್ಮಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೃಥ್ವೀ ಕಾರಿಂಜೆ ಕಾರ್ಯಕ್ರಮ ನಿರೂಪಿಸಿದರು. ಗಂಧರ್ವ ತಂಡದ ಸಂಚಾಲಕರಾದ ರಾಜ್‌ಕುಮಾರ್ ಸ್ವಾಗತಿಸಿದರು. ಚಿದಂಬರ ಕೋಟೆ ವಂದಿಸಿದರು.