Advertisement

Delhi: ಜಲಮಂಡಲಿ ಟೆಂಡರ್‌: ಕೇಜ್ರಿ ಆಪ್ತನಿಗೆ ಇ.ಡಿ. ಬಿಸಿ

12:12 AM Feb 07, 2024 | Team Udayavani |

ನವದೆಹಲಿ: ಅಬಕಾರಿ ನೀತಿ ಹಗರಣದ ಬೆನ್ನಲ್ಲೇ ಇದೀಗ ಸಿಎಂ ಅರವಿಂದ್‌ ಕೇಜ್ರಿ ವಾಲ್‌ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಮತ್ತೂಂದು ಹಗರಣದ ಆರೋಪ ಕೇಳಿ ಬಂದಿದೆ. ದೆಹಲಿಯ ಜಲಮಂಡಳಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

Advertisement

ಅದರಲ್ಲಿ ಆಪ್‌ 17 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಮಂಗಳವಾರ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಸೇರಿದಂತೆ ಇತರೆ ಆಪ್ತರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡರು.

ದೆಹಲಿ ಜಲಮಂಡಳಿ ಟೆಂಡರ್‌ನಲ್ಲಿ ಲಂಚ ಪಡೆಯಲಾಗಿದೆ. ನಂತರ ಆಮ್‌ ಆದ್ಮಿ ಪಕ್ಷದ ಚುನಾವಣಾ ನಿಧಿಗೆ ಆ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಅಕ್ರಮ ಹಣ ವರ್ಗಾ ವಣೆ ತಡೆ ಕಾಯ್ದೆಯಡಿಯಲ್ಲಿ ಈ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಭವ್‌ ಕುಮಾರ್‌ ನಿವಾಸ, ದೆಹಲಿ ಜಲಮಂಡಳಿಯ ಮಾಜಿ ಸದಸ್ಯ ಶಲಭ್‌ ಕುಮಾರ್‌, ರಾಜ್ಯಸಭಾ ಸದಸ್ಯ ಎನ್‌.ಡಿ.ಗುಪ್ತ ಸೇರಿದಂತೆ ಪ್ರಮುಖರ ನಿವಾಸಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ.

ಮನರೇಗಾ ನಿಧಿ ದುರ್ಬಳಕೆ: ಬಂಗಾಳದಲ್ಲೂ ಇ.ಡಿ.ದಾಳಿ
ಕೊಲ್ಕತ್ತಾ: ಮನರೇಗಾ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಪಶ್ಚಿಮ ಬಂಗಾಳದ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಧಿಕಾರಿಯೊಬ್ಬರ ತಂಗಿಯ ನಿವಾಸದಲ್ಲಿ 4.5 ಕೋಟಿ ರೂ. ನಗದು ಪತ್ತೆಯಾಗಿದೆ. ಇದು ಮನರೇಗಾದಲ್ಲಿ ದುರ್ಬಳಕೆ ಯಾಗಿರುವ ಹಣವಾಗಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ದಾಳಿ ಖಂಡಿಸಿರುವ ಟಿಎಂಸಿ, ಪ.ಬಂಗಾಳಕ್ಕೆ ನೀಡಬೇಕಾ ಗಿರುವ ತೆರಿಗೆ ಬಾಕಿಯನ್ನು ಪಾವತಿ ಸುವಂತೆ ಒತ್ತಾಯಿಸಿ ನಡೆಯುತ್ತಿ ರುವ ಧರಣಿಯ ಗಮನ ಬೇರೆಡೆಗೆ ಸೆಳೆಯಲು ಕೇಂದ್ರ ಸೇಡಿನ ರಾಜಕೀ ಯ ಮಾಡುತ್ತಿದೆ ಎಂದು ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next