ನವದೆಹಲಿ: ಯಮುನಾ ನದಿ ನೀರು ಅಪಾಯಕಾರಿ ಮತ್ತು ವಿಷಕಾರಿ ಎಂದು ಬಿಜೆಪಿ ಬಲವಾದ ಆರೋಪಗಳನ್ನು ಮಾಡಿದ ಕೆಲವೇ ದಿನಗಳಲ್ಲಿ, ದೆಹಲಿ ಜಲ ಮಂಡಳಿಯ ನಿರ್ದೇಶಕ ಸಂಜಯ್ ಶರ್ಮಾ ಅವರು ಭಾನುವಾರ (ಅಕ್ಟೋಬರ್ 30) ನದಿ ನೀರಿನಲ್ಲಿ ಸ್ನಾನ ಮಾಡಿದ್ದಾರೆ.
ನಿರ್ದೇಶಕ ಶರ್ಮಾ ಅವರು ಯಮುನಾ ನದಿಯ ನೀರನ್ನು ಕಂಟೇನರ್‌ನಲ್ಲಿ ಸಂಗ್ರಹಿಸಿ, ಅಪಾಯಕಾರಿ ಅಲ್ಲ ಎಂದು ತೋರಿಸಲು ದಂಡೆಯ ಮೇಲೆ ಸ್ನಾನ ಮಾಡಿದರು. “ಇದು ಸಂಸದ ಪ್ರವೇಶ್ ವರ್ಮಾ ಜಿ ಅವರಿಗೆ ಯಾವುದೇ ಸಂದೇಶವಲ್ಲ. ಅವರು ನಮ್ಮ ಗೌರವಾನ್ವಿತ ಸಂಸದರು. ಈ ಸಂದೇಶವು ದೆಹಲಿಯ ಜನರಿಗೆ ಎಂದು ಡಿಜೆಬಿ ನಿರ್ದೇಶಕ ಶರ್ಮಾ ಸ್ನಾನದ ನಂತರ ಹೇಳಿದರು.
ಬಿಜೆಪಿಯ ಹೇಳಿಕೆಗಳನ್ನು ತಳ್ಳಿಹಾಕಿದ ಅವರು ‘ದೆಹಲಿ ಸರ್ಕಾರವು ಛತ್ ಮೊದಲು ಯಮುನಾ ನೀರನ್ನು ಸ್ವಚ್ಛಗೊಳಿಸಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದರು.
ಮತ್ತು ವಿಷಕಾರಿ ನೀರಿನಲ್ಲಿ ಸ್ನಾನ ಮಾಡುವಂತೆ ದೆಹಲಿ ಜಲ ಮಂಡಳಿಯ ನಿರ್ದೇಶಕರಿಗೆ ಸವಾಲು ಹಾಕಿದೆ. ಇದಕ್ಕೂ ಮೊದಲು, ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು ಛತ್ ಪೂಜೆಗೆ ಮುನ್ನ ಯಮುನಾ ಪವಿತ್ರ ನೀರಿನಲ್ಲಿ ಆಂಟಿಫೋಮಿಂಗ್ ರಾಸಾಯನಿಕಗಳನ್ನು ಬಳಸಿದ್ದಕ್ಕಾಗಿ ದೆಹಲಿ ಸರ್ಕಾರದ ಅಧಿಕಾರಿಗಳನ್ನು ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.