Advertisement

ಮಲಿನ ನಗರ: ಟಾಪ್‌ 100ರಲ್ಲಿ ಭಾರತದ 63 ಸಿಟಿಗಳು!

05:58 PM Mar 23, 2022 | Team Udayavani |

ಕಳೆದ ವರ್ಷ ಅಂದರೆ 2021ರಲ್ಲಿ ಭಾರತದ ವಾಯು ಗುಣಮಟ್ಟವು ಎಷ್ಟು ಹದಗೆಟ್ಟಿತ್ತೆಂದರೆ, ಜಗತ್ತಿನ 100 ಅತೀ ಹೆಚ್ಚು ವಾಯುಮಲಿನ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ 63 ನಗರಗಳು ಭಾರತದ್ದೇ ಆಗಿವೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಹರಿಯಾಣ ಮತ್ತು ಉತ್ತರಪ್ರದೇಶದ ನಗರಗಳಾಗಿವೆ. ಸ್ವಿಜರ್ಲೆಂಡ್‌ನ‌ ಐಕ್ಯೂಏರ್‌ ಬಿಡುಗಡೆ ಮಾಡಿದ ವಿಶ್ವ ವಾಯು ಗುಣಮಟ್ಟ ವರದಿ ಈ ವಿಚಾರವನ್ನು ಬಹಿರಂಗಪಡಿಸಿದೆ.

Advertisement

ಮಾಲಿನ್ಯಯುಕ್ತ ರಾಜಧಾನಿ ದಿಲ್ಲಿ
ಸತತ ಎರಡನೇ ವರ್ಷವೂ ದಿಲ್ಲಿಯು ಜಗತ್ತಿನ ಅತೀ ಹೆಚ್ಚು ಮಾಲಿನ್ಯಯುಕ್ತ ರಾಜಧಾನಿ ಎಂಬ ಕುಖ್ಯಾತಿ ಪಡೆದಿದೆ. ಇಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಮಾಲಿನ್ಯ ಶೇ.15ರಷ್ಟು ಹೆಚ್ಚಳವಾಗಿದೆ.

ಟಾಪ್‌ 15ರಲ್ಲಿ ಭಾರತದ 10 ಸಿಟಿಗಳು
ಜಗತ್ತಿನ ಟಾಪ್‌ 15 ಮಲಿನ ನಗರಗಳ ಪೈಕಿ 10 ನಗರಗಳು ಭಾರತದಲ್ಲೇ ಇವೆ. ಅವೆಂದರೆ,
– ರಾಜಸ್ಥಾನದ ಭಿವಡಿ
– ಉತ್ತರಪ್ರದೇಶದ ಗಾಜಿಯಾಬಾದ್‌, ಜೌನ್‌ಪುರ್‌, ನೋಯ್ಡಾ, ಬಾಗ³ತ್‌, ಗ್ರೇಟರ್‌ ನೋಯ್ಡಾ
– ಹರಿಯಾಣದ ಹಿಸಾರ್‌,ಫ‌ರೀದಾಬಾದ್‌, ರೋಹ್ಟಕ್
– ದಿಲ್ಲಿ

-ಚೀನದ ಹೋಟನ್‌, ಪಾಕಿಸ್ಥಾನದ ಫೈಸಲಾಬಾದ್‌, ಭವಾಲ್ಪುರ್‌, ಪೇಶಾವರ ಹಾಗೂ ಲಾಹೋರ್‌ ಕೂಡ ಈ 15 ಮಲಿನ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಭಾರತದ ಸರಾಸರಿ ವಾಯು ಮಾಲಿನ್ಯ ಎಷ್ಟಿದೆ?
ಪ್ರತಿ ಕ್ಯೂಬಿಕ್‌ ಮೀಟರ್‌ಗೆ 58.1 ಮೈಕ್ರೋಗ್ರಾಂ

ಇದು ಡಬ್ಲ್ಯುಎಚ್‌ಒ ಗಾಳಿ ಗುಣಮಟ್ಟ ಮಾರ್ಗಸೂಚಿ ಗಿಂತ ಎಷ್ಟು ಪಟ್ಟು ಹೆಚ್ಚು?

10 ಪಟ್ಟು

Advertisement

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುರಕ್ಷಿತ ಮಿತಿ ಎಷ್ಟು ?
ಕ್ಯೂಬಿಕ್‌ ಮೀಟರ್‌ಗೆ 5 ಮೈಕ್ರೋಗ್ರಾಂ

Advertisement

Udayavani is now on Telegram. Click here to join our channel and stay updated with the latest news.

Next