Advertisement

ದಿಲ್ಲಿ: ಪೇಜಾವರ ಮಠದ ಸಂಶೋಧನ ಭವನ ಉದ್ಘಾಟನೆ

10:35 AM Oct 31, 2018 | Team Udayavani |

ಉಡುಪಿ: ಪೇಜಾವರ ಶ್ರೀಗಳ ನೇತೃತ್ವದ ರಾಮವಿಟuಲ ಶಿಕ್ಷಣ ಸಮಿತಿಯ ಹೊಸದಿಲ್ಲಿಯಲ್ಲಿರುವ ವೇದವೇದಾಂತ ಅಧ್ಯಯನ ಮತ್ತು ಸಂಶೋಧನ ಪ್ರತಿಷ್ಠಾನ ಭವನದ ಉದ್ಘಾಟನೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಗಳವಾರ ನೆರವೇರಿಸಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ಸಂಸ್ಕೃತದ ಮಹತ್ವ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಬಣ್ಣಿಸಿ ಶ್ರೀಪಾದರ ಸಮಾಜಮುಖೀ ಸೇವೆಯನ್ನು ಶ್ಲಾ ಸಿದರು. 

ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ, ಸಂಸ್ಕೃತದ ಭಾಷೆಯ ವ್ಯಾಪ್ತಿ ದೊಡ್ಡದು. ದೇಶ
ವಿದೇಶಗಳಲ್ಲಿ ಅದರ ವ್ಯಾಪ್ತಿ ವಿಸ್ತರಿಸಿದೆ ಎಂದರು. ಸಾಫ್ಟ್ವೇರ್‌ ನಿರ್ಮಾಣದಲ್ಲಿ ಸಂಸ್ಕೃತದ ಪಾತ್ರದ ಕುರಿತು ತಿಳಿಸಿದರು.

ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಸಂಸ್ಕೃತ ಅಧ್ಯಯನದಿಂದ ಸಂಸ್ಕೃತಿಯ ಅಭ್ಯುದಯವಾಗುತ್ತದೆ ಎಂದರಲ್ಲದೆ ಜಗದ್ಗುರು ಮಧ್ವಾಚಾರ್ಯರ ಕರ್ಮ ಮತ್ತು ಭಕ್ತಿ ಸಿದ್ಧಾಂತದ ಪ್ರಸ್ತುತತೆಯನ್ನು ವಿವರಿಸಿದರು. ಈ ಸಂಸ್ಥೆಯ ಮೂಲಕ ಸಂಸ್ಕೃತ-ಯೋಗ -ತತ್ವಶಾಸ್ತ್ರಗಳ ವಿಶಿಷ್ಟ ಪರಿಚಯವನ್ನು ಹಿಂದಿ ಭಾಷೆಯ ಮೂಲಕ ಮಾಡುವ ಸಂಕಲ್ಪವನ್ನು ಪ್ರಕಟಿಸಿದರು. 

ಸಹಾಯಕ ಸಚಿವ ವಿಜಯ್‌ ಗೋಯಲ್‌, ಡಿ.ಪಿ. ಅನಂತ, ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಡಾ| ಬಿ.ಡಿ. ಪಾಟೀಲ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next