Advertisement
ಡೆಲ್ಲಿ ತನ್ನ ಈವರೆಗಿನ 7 ಪಂದ್ಯ ಗಳಲ್ಲಿ ಎರಡನ್ನು ದ್ವಿತೀಯ ತವರಾದ ವಿಶಾಖ ಪಟ್ಟಣದಲ್ಲಿ ಆಡಿತ್ತು. ಉಳಿ ದಂತೆ ಮುಲ್ಲಾನ್‌ಪುರ್, ಜೈಪುರ, ಮುಂಬಯಿ, ಲಕ್ನೋ ಮತ್ತು ಹೈದರಾ ಬಾದ್‌ನಲ್ಲಿ ಕಣಕ್ಕಿಳಿದಿತ್ತು. ಇದೀಗ ಕೋಟ್ಲಾಕ್ಕೆ ಮರಳುವ ಕಾರಣ ತಂಡ ಭಾರೀ ಖುಷಿಯಲ್ಲಿದೆ. ಅದರಲ್ಲೂ ರಿಷಭ್ ಪಂತ್ ಪಾಲಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿದೆ. 2022ರ ಕೊನೆಯಲ್ಲಿ ಭೀಕರ ಅಪಘಾತಕ್ಕೆ ಸಿಲುಕಿ, ಪವಾಡಸದೃಶ ರೀತಿಯಲ್ಲಿ ಬದುಕಿ ಉಳಿದ ರಿಷಭ್ ಪಂತ್, ಅನಂತರ ತವರಿನ ಕೋಟ್ಲಾದಲ್ಲಿ ಆಡಲಿರುವ ಮೊದಲ ಪಂದ್ಯ ಇದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಈವರೆಗಿನ 7 ಪಂದ್ಯಗಳಲ್ಲಿ ಮೂರನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಆದರೆ ಲಕ್ನೋ ಮತ್ತು ಗುಜರಾತ್ ವಿರುದ್ಧ ಸಾಧಿಸಿದ ಪರಿಣಾಮಕಾರಿ ಗೆಲುವು ಡೆಲ್ಲಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇನ್ನೊಂದೆಡೆ ಹೈದರಾಬಾದ್ ಡೆಲ್ಲಿಗಿಂತ ಮಿಗಿಲಾದ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಒಂದೇ ಋತುವಿನಲ್ಲಿ ಎರಡು ಸಲ ಐಪಿಎಲ್ ಗರಿಷ್ಠ ಮೊತ್ತದ ದಾಖಲೆಯನ್ನು ಸ್ಥಾಪಿಸಿದ ಛಾತಿ ಕಮಿನ್ಸ್ ಬಳಗದ್ದು. ಮುಂಬೈ ವಿರುದ್ಧ 3ಕ್ಕೆ 277 ರನ್ ಪೇರಿಸಿದ ಬಳಿಕ ಆರ್‌ಸಿಬಿ ವಿರುದ್ಧ 3ಕ್ಕೆ 287 ರನ್ ರಾಶಿ ಹಾಕಿ ತನ್ನದೇ ದಾಖಲೆ ಯನ್ನು ತಿದ್ದಿ ಬರೆದ ತಂಡವಿದು. ಆರ್‌ಸಿಬಿ ವಿರುದ್ಧ ರನ್ ಪ್ರವಾಹ ಹರಿಸಿದ ಬಳಿಕ ಹೈದರಾಬಾದ್ ಆಡು ತ್ತಿರುವ ಮೊದಲ ಪಂದ್ಯ ಇದಾಗಿದೆ.
Related Articles
Advertisement
ಕೀಪರ್ ಹೆನ್ರಿಚ್ ಕ್ಲಾಸೆನ್ ಮತ್ತೋರ್ವ ಡೇಂಜರಸ್ ಬ್ಯಾಟರ್. ಇವರ ಸ್ಟ್ರೈಕ್‌ರೇಟ್ ಕೂಡ 199ರಷ್ಟಿದೆ. ಆದರೆ ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ 6.06ರ ಅತ್ಯುತ್ತಮ ಇಕಾನಮಿ ರೇಟ್ ಹೊಂದಿರುವುದು ಡೆಲ್ಲಿ ಪಾಲಿನ ಆಶಾಕಿರಣವಾಗಿದೆ. ಟ್ರಿಸ್ಟನ್ ಸ್ಟಬ್ಸ್, ಅಕ್ಷರ್ ಪಟೇಲ್ ಕೂಡ ತವರಲ್ಲಿ ಮಿಂಚಬೇಕಾದ ಅಗತ್ಯವಿದೆ.
ಹೇಗಿದ್ದೀತು ಕೋಟ್ಲಾ ಪಿಚ್?ಗಾಯಾಳು ಡೇವಿಡ್ ವಾರ್ನರ್ ಬದಲು ಆಡಲಿರುವ ಜೇಕ್ ಫ್ರೆàಸರ್ ಮೆಕ್‌ಗರ್ಕ್, ಪೃಥ್ವಿ ಶಾ, ರಿಷಭ್ ಪಂತ್, ಅಭಿಷೇಕ್ ಪೊರೆಲ್, ಶೈ ಹೋಪ್ ಅವರೆಲ್ಲ ಡೆಲ್ಲಿ ಬ್ಯಾಟಿಂಗ್ ಸರದಿಯ ಭರವಸೆಗಳು. ಎದುರಾಳಿ ಬ್ಯಾಟರ್ ಮುನ್ನುಗ್ಗಿ ಬಾರಿಸತೊಡಗಿದರೆ ಹೈದರಾಬಾದ್ ಬೌಲಿಂಗ್ ಕೂಡ ನೆಲಕಚ್ಚುತ್ತದೆ ಎಂಬುದಕ್ಕೆ ಆರ್‌ಸಿಬಿ ಪಂದ್ಯವೇ ಉತ್ತಮ ನಿದರ್ಶನ. ಭುವನೇಶ್ವರ್ ಕುಮಾರ್ ಸೇರಿದಂತೆ ಹೈದರಾಬಾದ್‌ನ ಇಡೀ ಬ್ಯಾಟಿಂಗ್ ಯೂನಿಟ್ ಆರ್‌ಸಿಬಿ ವಿರುದ್ಧ ದಂಡಿಸಿ ಕೊಂಡಿ ದ್ದನ್ನು ಮರೆಯುವಂತಿಲ್ಲ. ಪ್ಯಾಟ್ ಕಮಿನ್ಸ್ ಕೂಡ ಓವರಿಗೆ ಹತ್ತಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಯಾವುದಕ್ಕೂ ಕೋಟ್ಲಾ ಪಿಚ್ ಹೇಗೆ ವರ್ತಿಸೀತು ಎಂಬುದೊಂದು ಕುತೂಹಲ.