ನವದೆಹಲಿ: ಯಾವುದೇ ಸಿದ್ಧ ಆಹಾರದ ಪ್ಯಾಕೆಟ್ ಮೇಲೆ, ಆ ಆಹಾರ ತಯಾರಿಸಲು ಬಳಸಲಾಗಿರುವ ಎಲ್ಲಾ ಸಾಮಗ್ರಿಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.
ಅನೇಕ ಸಿದ್ಧ ಆಹಾರ ಪ್ಯಾಕೆಟ್‌ಗಳಲ್ಲಿ ಪ್ರಾಣಿಜನ್ಯ ಉತ್ಪನ್ನಗಳಿಂದ ಪಡೆಯಲಾಗಿರುವ ಪದಾರ್ಥಗಳನ್ನು ಬಳಸಲಾಗುತ್ತಿದ್ದರೂ, ಅದನ್ನು ಮರೆಮಾಚಲಾಗುತ್ತಿದೆ ಎಂದು ನಮೂದಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ನಿಯಮ ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
ಉದಾಹರಣೆಗೆ, ಮ್ಯಾಗಿ ಮತ್ತು ಆಲೂಗಡ್ಡೆ ಚಿಪ್ಸ್ ತಯಾರಿಕೆಗೆ ಮೀನು, ಹಂದಿ ಮಾಂಸದ ಕೊಬ್ಬನ್ನು ಬಳಸಲಾಗುತ್ತದೆ.
ಇದನ್ನೂ ಓದಿ:ಕಾರವಾರ ನೌಕಾನೆಲೆಗೆ ಪಶ್ಚಿಮ ನೇವಿ ಫ್ಲಾಗ್ ಆಫೀಸರ್ ಕಮಾಂಡ್ ರಾಜೇಂದ್ರ ಬಹದ್ದೂರ್ ಸಿಂಗ್ ಭೇಟಿ
ಹಾಗಿದ್ದರೂ, ಪ್ಯಾಕೇಟ್‌ನ ಮೇಲೆ ಇದು ಸಸ್ಯಾಹಾರ ಎಂಬ ಹಸಿರು ಚುಕ್ಕಿಯ ಮಾರ್ಕ್ ಮುದ್ರಿಸಲಾಗಿರುತ್ತದೆ. ಹೀಗೆ ಮಾಡಿದರೆ, ಗ್ರಾಹಕರಿಗೆ ಮೋಸ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.