Advertisement
ಮಾರ್ಗಸೂಚಿಗಳ ವಿರುದ್ಧ ಭಾರತೀಯ ರಾಷ್ಟ್ರೀಯ ರೆಸ್ಟಾರಂಟ್‌ಗಳ ಸಂಘ ಹಾಗೂ ಭಾರತೀಯ ಹೋಟೆಲ್‌ಗಳು ಹಾಗೂ ರೆಸ್ಟಾರಂಟ್‌ಗಳ ಒಕ್ಕೂಟ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಮೇಲ್ಮನವಿಗಳ ಅನುಸಾರವಾಗಿ ಮಾರ್ಗಸೂಚಿಗಳನ್ನು ಪರಿಶೀಲನೆಗೊಳಿಸುವ ಅಗತ್ಯವಿದೆ ಎಂದು ಹೇಳಿದೆಯಲ್ಲದೆ, ಈ ಕುರಿತಂತೆ ಒಕ್ಕೂಟವು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿತು.
ಇದರ ಜೊತೆಗೆ, ಮುಂದಿನ ಆದೇಶ ಹೊರಬೀಳುವವರೆಗೆ ಸೇವಾ ತೆರಿಗೆ ಮುಂದುವರಿಸಬಹುದು. ಆದರೆ, ಗ್ರಾಹಕರಿಗೆ ಪ್ರದರ್ಶಿಸಲಾಗುವ ಹೋಟೆಲ್‌ನ ಮೆನುವಿನಲ್ಲಿ ಯಾವ ತಿನಿಸಿಗೆ ಎಷ್ಟೆಷ್ಟು ಸೇವಾ ಶುಲ್ಕ ಎಂಬುದನ್ನು ಕಣ್ಣಿಗೆ ಕಾಣುವಂತೆ ನಮೂದಿಸಬೇಕು ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ. ಆದರೆ, ಹೋಟೆಲ್‌ನಿಂದ ಗ್ರಾಹಕರು ಕೊಂಡೊಯ್ಯುವ ಪಾರ್ಸೆಲ್‌ಗಳ ಮೇಲೆ ಸೇವಾ ಶುಲ್ಕ ಹೇರಕೂಡದು ಎಂಬ ಸೂಚನೆಯನ್ನೂ ನೀಡಿದೆ.