ನವದೆಹಲಿ: ಆಮ್ ಆದ್ಮಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಿಸುವ “ಮುಖ್ಯಮಂತ್ರಿ ಘರ್, ಘರ್ ರೇಷನ್ ಯೋಜನೆ”ಯನ್ನು ದೆಹಲಿ ಹೈಕೋರ್ಟ್ ಗುರುವಾರ (ಮೇ 19) ರದ್ದುಗೊಳಿಸಿದೆ.
ಇದನ್ನೂ ಓದಿ:‘ಅಶ್ವತ್ಥಾಮ’ನಾಗಲು ಶಿವಣ್ಣ ರೆಡಿ; ಸೆಪ್ಟೆಂಬರ್‌ನಿಂದ ಚಿತ್ರೀಕರಣ ಪ್ರಾರಂಭ
ದೆಹಲಿ ಸರ್ಕಾರದ ಈ ಯೋಜನೆಯನ್ನು ಪ್ರಶ್ನಿಸಿ ಇಬ್ಬರು ಪಡಿತರ ವಿತರಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ಸಮ್ಮತಿ ಸೂಚಿಸಿತ್ತು.
ದೆಹಲಿ ಹೈಕೋರ್ಟ್ ನ ಹಂಗಾಮಿ ಚೀಫ್ ಜಸ್ಟೀಸ್ ವಿಪಿನ್ ಸಾಂಘಿ ಮತ್ತು ಜಸ್ಟೀಸ್ ಜಸ್ಮೀತ್ ಸಿಂಗ್, ದೆಹಲಿ ಸರ್ಕಾರವು ಮನೆ ಬಾಗಿಲಿಗೆ ಉಚಿತ ಪಡಿತರ ಯೋಜನೆಯನ್ನು ಜಾರಿಗೊಳಿಸಲು ಸ್ವತಂತ್ರವಾಗಿದೆ. ಆದರೆ ಈ ಯೋಜನೆಗೆ ಕೇಂದ್ರ ಸರ್ಕಾದ ಒದಗಿಸುವ ಧಾನ್ಯಗಳನ್ನು ಬಳಸುವಂತಿಲ್ಲ ಎಂದು ಸೂಚನೆ ನೀಡಿದೆ.
ದೆಹಲಿ ಸರ್ಕಾರಿ ಪಡಿತರ ವಿತರಕರ ಸಂಘ ಮತ್ತು ದೆಹಲಿ ಪಡಿತರ ವಿತರಕರ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯ ಕುರಿತು ತೀವ್ರ ವಿಚಾರಣೆ ನಡೆಸಿ, ವಾದ, ಪ್ರತಿವಾದ ಆಲಿಸಿದ ನಂತರ ದೆಹಲಿ ಹೈಕೋರ್ಟ್ ಜನವರಿ 10ರಂದು ತೀರ್ಪನ್ನು ಕಾಯ್ದಿರಿಸಿತ್ತು.