ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಐದನೇ ಸಮನ್ಸ್ ಜಾರಿ ಮಾಡಿದೆ ಅದರಂತೆ ಮುಂದಿನ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಆಪ್ ಮುಖ್ಯಸ್ಥರಿಗೆ ಇದು ಐದನೇ ಸಮನ್ಸ್ ಆಗಿದೆ. ಇದಕ್ಕೂ ಮುನ್ನ ಜನವರಿ 13ರಂದು ಕೇಜ್ರಿವಾಲ್‌ಗೆ ನಾಲ್ಕನೇ ಬಾರಿ ಸಮನ್ಸ್ ಜಾರಿ ಮಾಡಿದ್ದ ಕೇಂದ್ರೀಯ ಸಂಸ್ಥೆ ಜನವರಿ 18ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ದೆಹಲಿ ಮುಖ್ಯಮಂತ್ರಿ ಇದನ್ನು “ಅಕ್ರಮ ಮತ್ತು ರಾಜಕೀಯ ಪ್ರೇರಿತ” ಎಂದು ಕರೆದು ವಿಚಾರಣೆಯಿಂದ ಹಿಂದೆಸರಿದಿದ್ದರು.
ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಆರೋಪಿಸಿದೆ.
ಕೇಜ್ರಿವಾಲ್ ಅವರು ನವೆಂಬರ್ 2, ಡಿಸೆಂಬರ್ 22 ಮತ್ತು ಜನವರಿ 3 ರಂದು ನೀಡಿದ ಮೂರು ಸಮನ್ಸ್‌ಗಳನ್ನು ತಿರಸ್ಕರಿಸಿದ್ದರು.
ಇದನ್ನೂ ಓದಿ: Snowfall: ಭಾರೀ ಹಿಮಪಾತ… ಅಟಲ್ ಸುರಂಗದ ಬಳಿ ಸಿಲುಕಿಕೊಂಡ 300 ಪ್ರವಾಸಿಗರ ರಕ್ಷಣೆ