Advertisement

ದಿಲ್ಲಿ ಸ್ಫೋಟ: ಭಟ್ಕಳ್‌ ವಿರುದ್ಧ ದೋಷ ನಿಗದಿ 

09:20 AM Feb 14, 2018 | Team Udayavani |

ಹೊಸದಿಲ್ಲಿ: ದಿಲ್ಲಿಯಲ್ಲಿ 2008 ಸಪ್ಟೆಂಬರ್‌ನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಸಹಸ್ಥಾಪಕ ಯಾಸೀನ್‌ ಭಟ್ಕಳ್‌ ಹಾಗೂ ಸಹಚರನ ವಿರುದ್ಧ ದಿಲ್ಲಿಯ ನ್ಯಾಯಾಲಯ ಮಂಗಳವಾರ ದೋಷ ನಿಗದಿ ಮಾಡಿದೆ. ಸಂಚು ಮತ್ತು ಉಗ್ರ ಕೃತ್ಯಕ್ಕೆ ಸಂಬಂಧಿಸಿದ ಇತರಆರೋಪಗಳನ್ನು ನಿಗದಿ ಮಾಡಲಾಗಿದೆ. ಅಂದು ನಡೆದ ಸರಣಿ ಸ್ಫೋಟದಲ್ಲಿ 26 ಮಂದಿ ಮೃತಪಟ್ಟು, 135 ಮಂದಿ ಗಾಯಗೊಂಡಿದ್ದರು.

Advertisement

ಯಾಸೀನ್‌ ಮತ್ತು ಸಹಚರ ಅಸಾದುಲ್ಲಾ ಅಖ್ತರ್‌ ವಿರುದ್ಧ ಹೆಚ್ಚುವರಿ ಸೆಷನ್ಸ್‌ ಜಡ್ಜ್ ಸಿದ್ಧಾರ್ಥ್ ಶರ್ಮಾ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಅನ್ವಯ ವಿವಿಧ ಆರೋಪಗಳನ್ನು ನಿಗದಿ ಮಾಡಿದ್ದಾರೆ. ಫೆ.28ರಂದು ಮುಂದಿನ ವಿಚಾರಣೆ ನಡೆಯಲಿದೆ.

ಸರಣಿ ಸ್ಫೋಟಗಳನ್ನು ನಡೆಸುವ ಮೂಲಕ ಆರೋಪಿಗಳು ದೇಶದ ವಿರುದ್ಧ ಸಮರ ಸಾರಿದ್ದಾರೆ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ. 2013ರ ಆ.28ರಂದು  ಭಾರತ-ನೇಪಾಲ ಗಡಿಯಲ್ಲಿ ಭಟ್ಕಳ್‌ನನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next