Advertisement

Delhi; ಕಾಂಗ್ರೆಸ್‌, ಆಪ್‌ ಕಂದಕ ಮತ್ತಷ್ಟು ಹೆಚ್ಚಳ!

12:01 AM Jul 09, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಸೋಲಿನ ಬಳಿಕ ದಿಲ್ಲಿಯಲ್ಲಿ ಕಾಂಗ್ರೆಸ್‌ ಮತ್ತು ಆಪ್‌ ನಡುವಿನ ವೈಮನಸ್ಸು ಹೆಚ್ಚಾಗುತ್ತಿದೆ. ದಿಲ್ಲಿಯ ಲೋಕಸಭೆ ಕ್ಷೇತ್ರಗಳಲ್ಲಿ ಸೋಲು ಕಾಣಲು ಆಪ್‌ ಕಾರಣ ಎಂದು ದಿಲ್ಲಿ ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆಂದು ಮೂಲಗಳನ್ನು ಉಲ್ಲೇಖೀಸಿ ಮಾಧ್ಯಮ ಗಳು ವರದಿ ಮಾಡಿವೆ.

Advertisement

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಆಪ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭ ಸಂಪೂರ್ಣ ವಾಗಿ ಭಿನ್ನವಾಗಿದೆ. ಸಾರ್ವತ್ರಿಕ ಚುನಾ ವಣೆಯಲ್ಲಿ ಬಿಜೆಪಿ ವಿರುದ್ಧ ಮತ ವಿಭ ಜನೆಯನ್ನು ತಪ್ಪಿಸುವುದು ಮುಖ್ಯವಾ ಗಿತ್ತು. ಆದರೆ ದಿಲ್ಲಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆ ಸ್‌ ಪಕ್ಷವು ತನ್ನ ಹಿಡಿತವನ್ನು ಮರಳಿ ಪಡೆ ಯುವುದು ಮಹತ್ವದ್ದಾಗಿದೆ ಎನ್ನುವುದು ದಿಲ್ಲಿ ಕಾಂಗ್ರೆಸ್‌ ಘಟಕದ ಅಭಿಪ್ರಾಯ ಎನ್ನಲಾಗಿದೆ.

2014ರ ಬಳಿಕ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಮತದಾರರ ವರ್ಗವು ಸಂಪೂರ್ಣವಾಗಿ ಆಪ್‌ ಪಾಲಾಗಿದೆ. ಸದ್ಯಕ್ಕೆ ದಿಲ್ಲಿ ವಿಧಾನ ಸಭೆಯಲ್ಲಿ ಒಬ್ಬ ಕಾಂಗ್ರೆಸ್‌ ಶಾಸಕನೂ ಇಲ್ಲ. ಹಾಗಾಗಿ ತನ್ನ ಹಿಡಿತವನ್ನು ಮತ್ತೆ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next