Advertisement

Delhi CM ಕೇಜ್ರಿಗೆ ಕ್ಯಾನ್ಸರ್‌? ಜಾಮೀನು ವಿಸ್ತರಣೆಗೆ ಸುಪ್ರೀಂಗೆ ಮೇಲ್ಮನವಿ

01:15 AM May 28, 2024 | Team Udayavani |

ಹೊಸದಿಲ್ಲಿ: ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಾಂತರ ಜಾಮೀನು ಪಡೆದಿರುವ ಸಿಎಂ ಕೇಜ್ರಿವಾಲ್‌, ಅನಾರೋಗ್ಯದ ಹಿನ್ನೆಲೆ ಜಾಮೀನು ಅವಧಿಯನ್ನು 7 ದಿನ ಗಳವರೆಗೆ ವಿಸ್ತರಣೆ ಕೋರಿ ಸುಪ್ರೀಂಗೆ ಮೇಲ್ಮ ನವಿ ಸಲ್ಲಿಸಿ ದ್ದಾರೆ. ಅವರ ಜಾಮೀನು ಅವಧಿ ಜೂ.1ಕ್ಕೆ ಮುಕ್ತಾಯವಾಗಲಿದೆ. ಈ ಮಧ್ಯೆ ಕೇಜ್ರಿವಾಲ್‌ಗೆ ಕ್ಯಾನ್ಸರ್‌ ಇರುವ ಸಾಧ್ಯತೆಯಿದೆ ಎಂದು ಆಪ್‌ ನಾಯಕಿ, ಸಚಿವೆ ಆತಿಶಿ ಹೇಳಿದ್ದಾರೆ. ಕೇಜ್ರಿವಾಲರ ಆರಂಭಿಕ ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಅವರಲ್ಲಿ ಕೀಟೋನ್‌ ಪ್ರಮಾಣ ಹೆಚ್ಚಾಗಿದೆ. ದಿಢೀರ್‌ ತೂಕ ಇಳಿಕೆ ಮತ್ತು ಕೀಟೋನ್‌ ಪ್ರಮಾಣ ಹೆಚ್ಚಳವು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಸೂಚಕ ಎಂದು ಆತಿಶಿ ಹೇಳಿದ್ದಾರೆ.

Advertisement

ಈ ಹಿನ್ನೆಲೆ ಕೇಜ್ರಿವಾಲ್‌ ಜಾಮೀನು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದು, ರಜಾಕಾಲ ಪೀಠವು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಠಿನ ನಿಯಮಗಳಿಂದಾಗಿ ಕೇಜ್ರಿವಾಲ್‌ ಅನಾರೋಗ್ಯ ಹೆಚ್ಚಾಗಿದೆ ಎನ್ನಲಾಗಿದೆ. ಜೈಲಿನಲ್ಲಿದ್ದಾಗ ಕೇಜ್ರಿವಾಲ್‌ ಸುಮಾರು 6ರಿಂದ 7 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಬಿಡುಗಡೆ ಬಳಿಕ ಎಂದಿನ ಜೀವನಶೈಲಿಯ ಹೊರತಾಗಿಯೂ ತೂಕದಲ್ಲಿ ಏರಿಕೆಯಾಗಿಲ್ಲ.

ಮೂತ್ರದಲ್ಲಿ ಕೀಟೋನ್‌ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅಸಾಮಾನ್ಯ ರಕ್ತದೊತ್ತಡ ಗ್ಲುಕೋಸ್‌ ಕೂಡ ಹೆಚ್ಚಾಗಿದೆ. ಇದರಿಂದ ಮಧುಮೇಹ ಅಧಿಕವಾಗಿದೆ ಎಂದು ವೈದ್ಯಕೀಯ ಪರೀಕ್ಷೆಗಳಲ್ಲಿ ಗೊತ್ತಾಗಿದೆ. ಅಲ್ಲದೇ ಕಿಡ್ನಿಗೆ ಹಾನಿಯಾಗಿರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೇ 25ರಂದು ಮ್ಯಾಕ್ಸ್‌ ಆಸ್ಪತ್ರೆಯ ವೈದ್ಯರು ಕೇಜ್ರಿವಾಲರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಪಿಇಟಿ-ಸಿಟಿ ಒಳಗೊಂಡಂತೆ ಹಲವು ಪರೀಕ್ಷೆಗಳಿಗೆ ನಿರ್ದೇಶಿಸಿದ್ದಾರೆ. ಹೃದಯದ ಚಟುವಟಿಕೆ ಗಮನಿಸಲು ಹೋಲ್ಟರ್‌ ಮಾನಿಟರ್‌ ಧರಿಸಬೇಕಾಗಿದೆ. ಇದಕ್ಕಾಗಿ ಜಾಮೀನು ವಿಸ್ತರಣೆ ಮಾಡುವಂತೆ ಮೇಲ್ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next