ವಡೋದರಾ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುಜರಾತ್‌ನ ದಹೋದ್‌ನಲ್ಲಿ “ಜೈಶ್ರೀರಾಂ’ ಎಂಬ ಘೋಷಣೆ ಹಾಕಿದ್ದಾರೆ.
ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಅವರು, ಬಿಜೆಪಿ ನನ್ನ ವಿರುದ್ಧ ಹೇಳಬಾರದ್ದನ್ನು ಹೇಳುತ್ತಿದೆ. ಅದಕ್ಕೆ ಗಮನ ಕೊಡುವುದಿಲ್ಲ. ಗುಜರಾತ್‌ನಲ್ಲಿ ಅಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತವಾಗಿ ಅಯೋಧ್ಯಾ ಪ್ರವಾಸವನ್ನು ಆಯೋಜಿಸಲಾಗುವುದು. ಭಗವಂತ ಶ್ರೀರಾಮನ ದರ್ಶನದ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ,’ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಗುಜರಾತ್ ನ ಹಲವು ನಗರಗಳಲ್ಲಿ ಟೋಪಿ ಧರಿಸಿದ ಕೇಜ್ರಿವಾಲ್ ಬ್ಯಾನರ್ ಗಳು
“ಆಪ್ ಜನರಿಗಾಗಿ ಮತ್ತು ದೇವರಿಗಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಗುಜರಾತ್‌ನಲ್ಲಿ ಈ ಬಾರಿ ಆಪ್ ಸರ್ಕಾರ ಬರಲಿದೆ,’ ಎಂದು ಭರವಸೆ ವ್ಯಕ್ತಪಡಿಸಿದರು.
ನವದಹೆಲಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವುದಾಗಿ ಹಾಗೂ ಹಿಂದೂ ದೇವರನ್ನು ಪೂಜಿಸುವುದಿಲ್ಲ ಎಂದು ದೆಹಲಿ ಸರ್ಕಾರದ ಸಚಿವ ರಾಜೇಂದ್ರ ಪಾಲ್ ಗೌತಮ್ ಘೋಷಣೆ ಮಾಡಿದ್ದಂತೆಯೇ ದೆಹಲಿ ಸಿಎಂ ಜೈಶ್ರೀರಾಂ ಎಂಬ ಘೋಷಣೆ ಹಾಕಿದ್ದಾರೆ.