Advertisement

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

12:45 AM Sep 20, 2024 | Team Udayavani |

ಹೊಸದಿಲ್ಲಿ: ಆಪ್‌ ನಾಯಕಿ ಆತಿಷಿ ಅವರು ಶನಿವಾರ ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ದ್ದಾರೆ. ಕೇಜ್ರಿವಾಲ್‌ ಸಂಪುಟದಲ್ಲಿದ್ದ ಗೋಪಾಲ್‌ ರಾಯ್‌, ಸೌರಭ್‌ ಭಾರದ್ವಾಜ್‌, ಕೈಲಾಶ್‌ ಗೆಹ್ಲೋಟ್‌ ಮತ್ತು ಇಮ್ರಾನ್‌ ಹುಸೇನ್‌ ಜತೆಗೆ ಹೊಸದಾಗಿ ಮುಕೇಶ್‌ ಅಹ್ಲಾವತ್‌ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದಿಲ್ಲಿಯ ಸುಲ್ತಾನ ಪುರ್‌ ಮಜ್ರಾ ಕ್ಷೇತ್ರದ ಶಾಸಕ ಮುಕೇಶ್‌ ಅಹ್ಲಾವತ್‌ ಅವರು ಆಪ್‌ನ ದಲಿತ ಮುಖವಾಗಿದ್ದಾರೆ. ಒಂದು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ ಎಂದು ಆಪ್‌ ತಿಳಿಸಿದೆ. ಮುಂದಿನ ಫೆಬ್ರವರಿಯಲ್ಲಿ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next