ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರದಲ್ಲಿ ಭಾಗಿಯಾದ ಯಾರನ್ನೇ ಆಗಲಿ ಬಿಡಬೇಡಿ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ದಿಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮಂಗಳವಾರ ಇದೇ ಮೊದಲ ಬಾರಿಗೆ ಕೇಜ್ರಿವಾಲ್ ಜತೆಗೆ ಮಹತ್ವದ ಭೇಟಿ ನಡೆದಿದೆ. ಒಂದು ಗಂಟೆಯ ಕಾಲ ಇಬ್ಬರು ನಾಯಕರ ನಡುವೆ ಸಂಸತ್ ಭವನದಲ್ಲಿರುವ ಪ್ರಧಾನಿಯವರ ಕಚೇರಿಯಲ್ಲಿ ಮಾತುಕತೆ ನಡೆದಿದೆ.
ಬಳಿಕ ಮಾತನಾಡಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹಿಂಸೆ ಪ್ರಚೋದಿಸುವಂತೆ ಯಾರೊಬ್ಬರೂ ಮಾತನಾಡಬಾರದು. ಇಂತಹ ಗಲಭೆ ನಡೆಯದಂತೆ ಮನವಿ ಮಾಡಿದ್ದೇನೆ. ಪ್ರಧಾನಿ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದರು.
ಶಾರುಖ್ ಪಾಠಾಣ್ ಬಂಧನ: ಇದೇ ವೇಳೆ, ಗಲಭೆ ವೇಳೆ, ಪೊಲೀಸರ ಜತೆಗೆ ಬಂದೂಕು ತೋರಿದ ಯುವಕ ಶಾರುಖ್ ಪಾಠಾಣ್‌ನನ್ನು ದಿಲ್ಲಿ ಪೊಲೀಸರು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ನಿಧಿ ಸಂಗ್ರಹ: ಬಿಜೆಪಿ ನಾಯಕರಾದ ಕಪಿಲ್ ಮಿಶ್ರ ಮತ್ತು ತೇಜೇಂದರ್ ಪಾಲ್ ಸಿಂಗ್ ಬಗ್ಗ ಗಲಭೆಯ ಹಿಂದೂ ಸಂತ್ರಸ್ತರಿಗಾಗಿ 71,00,496 ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಕ್ರೌಡ್‌ಕ್ಯಾಶ್ ಎಂಬ ದೇಣಿಗೆ ಸಂಗ್ರಹ ವೆಬ್‌ಸೈಟ್ ಮೂಲಕ ಅವರು ಇಷ್ಟು ಮೊತ್ತದ ದೇಣಿಗೆ ಸಂಗ್ರಹಿಸಿದ್ದಾರೆ.