Advertisement
ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ದೈತ್ಯ ಶಕ್ತಿಯಾಗಿ ಅಬ್ಬರಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಡೆಲ್ಲಿ ಬೌಲರ್ ಗಳನ್ನ ಮನಬಂದಂತೆ ದಂಡಿಸಿ 7 ವಿಕೆಟ್ ನಷ್ಟಕ್ಕೆ 266 ರನ್ ಕಲೆ ಹಾಕಿದರು.
Related Articles
Advertisement
ಹೈದಾರಾಬಾದ್ ರೆಕಾರ್ಡ್ಸ್ಪವರ್ ಪ್ಲೇಯಲ್ಲಿ 3 ಫಿಫ್ಟಿ
ಟ್ರ್ಯಾವಿಸ್ ಹೆಡ್ ಪವರ್ ಪ್ಲೇಯಲ್ಲಿ 3 ಅರ್ಧ ಶತಕ ಬಾರಿಸಿ ಕ್ರಿಸ್ ಗೇಲ್, ಸುನೀಲ್ ನಾರಾಯಣ್ ಜತೆ ಜಂಟಿ ದ್ವಿತೀಯ ಸ್ಥಾನಿಯಾದರು. 6 ಅರ್ಧ ಶತಕ ಬಾರಿಸಿದ ಡೇವಿಡ್
ವಾರ್ನರ್‌ಗೆ ಅಗ್ರಸ್ಥಾನ.
16 ಎಸೆತಗಳಲ್ಲಿ 50
ಹೆಡ್ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಅಭಿಷೇಕ್ ಶರ್ಮ ಅವರ ಹೈದರಾಬಾದ್ ದಾಖಲೆಯನ್ನು ಸರಿದೂಗಿಸಿದರು. ಅಭಿಷೇಕ್ ಕಳೆದ ಮುಂಬೈ ಎದುರಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
3 ಓವರ್‌ಗಳಲ್ಲಿ ಫಿಫ್ಟಿ
ಹೆಡ್ ಮೊದಲ 3 ಓವರ್‌ಗಳಲ್ಲಿ ಅರ್ಧ ಶತಕ ಪೂರೈಸಿ ದ್ವಿತೀಯ ಸ್ಥಾನಿಯಾದರು. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ 2.5 ಓವರ್‌ಗಳಲ್ಲಿ 50 ರನ್ ಹೊಡೆದಿದ್ದರು.
5 ಓವರ್‌ಗಳಲ್ಲಿ 100
ಹೈದರಾಬಾದ್ ಐಪಿಎಲ್ ಚರಿತ್ರೆಯಲ್ಲೇ 5 ಓವರ್‌ಗಳಲ್ಲಿ 100 ರನ್ ಪೂರ್ತಿಗೊಳಿಸಿದ ಮೊದಲ ತಂಡವೆನಿಸಿತು. ಚೆನ್ನೈ ಮತ್ತು ಕೆಕೆಆರ್ 6 ಓವರ್‌ಗಳಲ್ಲಿ 100 ರನ್ ಬಾರಿಸಿದ್ದು ಈವರೆಗಿನ ದಾಖಲೆ ಆಗಿತ್ತು.
ಪವರ್ ಪ್ಲೇ ರೆಕಾರ್ಡ್
ಹೈದರಾಬಾದ್ ಪವರ್ ಪ್ಲೇಯಲ್ಲಿ ಅತ್ಯಧಿಕ 125 ರನ್ ಬಾರಿಸಿ ನೂತನ ದಾಖಲೆ ಸ್ಥಾಪಿಸಿತು. 2017ರ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಕೆಕೆಆರ್ 105 ರನ್ ಬಾರಿಸಿದ ದಾಖಲೆ ಪತನಗೊಂಡಿತು.
ಪವರ್ ಪ್ಲೇಯಲ್ಲಿ 84 ರನ್
ಟ್ರ್ಯಾವಿಸ್ ಹೆಡ್ ಪವರ್ ಪ್ಲೇಯಲ್ಲಿ ಹೈದರಾಬಾದ್ ಪರ ಅತ್ಯಧಿಕ 84 ರನ್ (26 ಎಸೆತ) ಹೊಡೆದರು. 2019ರ ಕೆಕೆಆರ್ ಎದುರಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ 25 ಎಸೆತಗಳಿಂದ 62 ರನ್ ಮಾಡಿದ ದಾಖಲೆ ಮುರಿಯಲ್ಪಟ್ಟಿತು.
10 ಓವರ್ ಬ್ಯಾಟಿಂಗ್ ದಾಖಲೆ
ಹೈದರಾಬಾದ್ ಮೊದಲ 10 ಓವರ್‌ಗಳಲ್ಲಿ ಅತ್ಯಧಿಕ 158 ರನ್ ಪೇರಿಸಿ ತನ್ನದೇ ದಾಖಲೆಯನ್ನು ಮುರಿಯಿತು. ಮುಂಬೈ ವಿರುದ್ಧ ಇದೇ ಸೀಸನ್‌ನಲ್ಲಿ 148 ರನ್ ಮಾಡಿತ್ತು.