ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಬೆಂಗಳೂರಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಅವರ ಲಗೇಜ್ ಬ್ಯಾಗ್ ಗಳಿಂದ ಬ್ಯಾಟ್, ಪ್ಯಾಡ್ ಮತ್ತು ಇತರ ಕ್ರಿಕೆಟ್ ಉಪಕರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಆಟಗಾರರು ಬಂದ ಒಂದು ದಿನದ ನಂತರ ಕಿಟ್ ಬ್ಯಾಗ್‌ಗಳು ಬಂದಿದ್ದರಿಂದ ಆಟಗಾರರು ಅದರ ಬಗ್ಗೆ ಒಂದು ದಿನದ ನಂತರ ತಿಳಿದುಕೊಂಡಿದ್ದಾರೆ. ಬಹುತೇಕ ಎಲ್ಲ ಆಟಗಾರರು ತಮ್ಮ ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ, ಯಶ್ ಧುಲ್ ಕನಿಷ್ಠ ಐದು ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ. ವಿದೇಶಿ ಆಟಗಾರರು ಕಳೆದುಕೊಂಡ ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ.ಆಗಿದೆ ಎಂದು ವರದಿಯಾಗಿದೆ.
ಈ ಕುರಿತು ಪೊಲೀಸರ ನೆರವು ಹೇಗೆ ಪಡೆಯುವುದು ಎಂಬ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಚರ್ಚೆ ನಡೆಸುತ್ತಿದೆ. ಗಮನಾರ್ಹವೆಂದರೆ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಅವರು ಇಲ್ಲಿಯವರೆಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲಿ ಸೋತಿದ್ದಾರೆ
ಎಪ್ರಿಲ್ 15 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್‌ಸಿಬಿ ವಿರುದ್ಧ ಸೋಲು ಅನುಭವಿಸಿತ್ತು. ತಂಡದ ಮುಂದಿನ ಪಂದ್ಯ ಗುರುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.