Advertisement

IPL 2025; ಏಳು ವರ್ಷ ಕೋಚ್ ಆಗಿದ್ದ ಪಾಂಟಿಂಗ್ ರನ್ನು ವಜಾ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್

09:20 AM Jul 14, 2024 | Team Udayavani |

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದೊಂದಿಗೆ ಏಳು ವರ್ಷಗಳ ಕಾಲ ಕಳೆದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಅವರನ್ನು ಜುಲೈ 13 ರಂದು ತಂಡದ ಮುಖ್ಯ ಕೋಚ್ ಸ್ಥಾನದಿಂದ ವಜಾಗೊಳಿಸಿದೆ.

Advertisement

ಡೆಕ್ಕಿ ಕ್ಯಾಪಿಟಲ್ಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ನಲ್ಲಿ ಪಾಂಟಿಂಗ್ ಅವರ ವಜಾಗೊಳಿಸಿದ ಸುದ್ದಿಯನ್ನು ಘೋಷಿಸಿತು. ಪಾಂಟಿಂಗ್ ಅಧಿಕಾರಾವಧಿಯಲ್ಲಿ ತಂಡದಲ್ಲಿ ಸಲಹೆಗಾರರ ​​ಪಾತ್ರವನ್ನು ಹೊಂದಿದ್ದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತೆರವಾದ ಸ್ಥಾನವನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ.

ಸುದೀರ್ಘ ಏಳು ವರ್ಷಗಳ ಕಾಲ ಕೋಚ್ ಆಗಿದ್ದರೂ ಡೆಲ್ಲಿ ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಪಾಂಟಿಂಗ್ ಗೆ ಸಾಧ್ಯವಾಗಲಿಲ್ಲ. 2024ರ ಐಪಿಎಲ್ ನಲ್ಲಿ ನಾಯಕ ರಿಷಭ್ ಪಂತ್ ಅವರು ಕಮ್ ಬ್ಯಾಕ್ ಮಾಡಿದರೂ ತಂಡವು ಪ್ಲೇ ಆಫ್ ಗೆ ಪ್ರವೇಶ ಪಡೆಯಲಿಲ್ಲ. ಈ ಬಾರಿ ಡಿಸಿ ಆರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

“ಆತ್ಮೀಯ ರಿಕಿ, ನೀವು ನಮ್ಮ ಮುಖ್ಯ ತರಬೇತುದಾರ ಸ್ಥಾನದಿಂದ ನಡೆಯುತ್ತಿವಾಗ, ಇದನ್ನು ಪದಗಳಲ್ಲಿ ಪ್ರಕಟ ಪಡಿಸಲು ನಮಗೆ ನಂಬಲಾಗದಷ್ಟು ಕಷ್ಟವಾಗುತ್ತಿದೆ.” ಎಂದು ಡಿಸಿ ಹೇಳಿದೆ.

Advertisement

ಪಾಂಟಿಂಗ್ ವಜಾ ಕುರಿತು ಅಧಿಕೃತ ಹೇಳಿಕೆ ಬರುವ ಮೊದಲೇ ಈ ಬಗ್ಗೆ ಗಂಗೂಲಿ ಹೇಳಿಕೆ ನೀಡಿದ್ದರು.

“ನಾನು ನಿಮಗೆ ಕೆಲವು ಸುದ್ದಿಗಳನ್ನು ನೀಡುತ್ತೇನೆ. ರಿಕಿ ಪಾಂಟಿಂಗ್ ಇನ್ನು ಮುಂದೆ ಡಿಸಿ ಕೋಚ್ ಆಗುವುದಿಲ್ಲ.  ಜೆಫ್ರಿ ಬಾಯ್ಕಾಟ್ ಸರಿಯಾಗಿ ಹೇಳಿದ್ದಾರೆ! ಈ ಏಳು ವರ್ಷಗಳಲ್ಲಿ ಪಾಂಟಿಂಗ್‌ ಗೆ ಡಿಸಿಯನ್ನು ಮುಂದಕ್ಕೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡಬೇಕಾಗಿದೆ. ಕೋಚ್‌ಗಾಗಿ ಭಾರತೀಯ ಆಯ್ಕೆಗಳನ್ನು ನೋಡಿ ಎಂದು ನಾನು ಸಲಹೆ ನೀಡುತ್ತೇನೆ” ಎಂದು ಗಂಗೂಲಿ ಸಂದರ್ಶನದಲ್ಲಿ ತಿಳಿಸಿದರು.

ನೀವು ಪಾಂಟಿಂಗ್ ಸ್ಥಾನವನ್ನು ತುಂಬುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನೇಕೆ ಆಗಬಾರದು? ನಾನು ಅದನ್ನು ಮಾಡಬಹುದೇ ಅಥವಾ ಇಲ್ಲವೇ ಎಂದು ನೋಡೋಣ. ನಾವು ಕೆಲವು ಹೊಸ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ಡಿಸಿ ಯ SA20 ತಂಡಕ್ಕೆ (ಪ್ರಿಟೋರಿಯಾ ಕ್ಯಾಪಿಟಲ್ಸ್) ಇಂಗ್ಲೆಂಡ್‌ನ ಹೊಸ ಸ್ಟಾರ್ ಜೇಮೀ ಸ್ಮಿತ್ ಅವರನ್ನು ಕರೆತರಲು ನಾನು ಬಯಸಿದ್ದೆ. ಅವರು ಬರಲು ಸಿದ್ಧರಾಗಿದ್ದರು. ಆದರೆ ಆ ಸಮಯದಲ್ಲಿ ಇಂಗ್ಲೆಂಡ್ ತನ್ನ ಭಾರತ ಪ್ರವಾಸಕ್ಕಾಗಿ ಕಾರ್ಯನಿರತವಾಗಿರುತ್ತದೆ” ಎಂದು ಗಂಗೂಲಿ ಸೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next