ಪಾಟ್ನಾ : ತಾಂತ್ರಿಕ ದೋಷ ಕಂಡು ಬಂದ ನಂತರ ಸ್ಪೈಸ್‌ಜೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
Advertisement
ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ದೆಹಲಿಗೆ ತೆರಳುತ್ತಿದ್ದ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಎಲ್ಲಾ 185 ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದರು. ತಾಂತ್ರಿಕ ದೋಷ ಘಟನೆಗೆ ಕಾರಣವಾಗಿದೆ , ಎಂಜಿನಿಯರಿಂಗ್ ತಂಡ ಮತ್ತಷ್ಟು ವಿಶ್ಲೇಷಿಸುತ್ತಿದೆ ಎಂದು ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.