Advertisement

ಹೈ ಅಲರ್ಟ್; ದಿಲ್ಲೀಲಿ ಸೇನಾ ಸಮವಸ್ತ್ರ ಧರಿಸಿದ 7 ಮಂದಿ ಉಗ್ರರ ಪತ್ತೆ!

01:23 PM Jan 18, 2017 | Team Udayavani |

ನವದೆಹಲಿ: ದೆಹಲಿ ವಿಮಾನ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅದಕ್ಕೆ ಕಾರಣ ಏಳು ಮಂದಿ ಶಂಕಿತ ಉಗ್ರರು ಸೇನಾಸಮವಸ್ತ್ರದಲ್ಲಿ ಆಗಮಿಸಿರುವುದು. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Advertisement

ಏಳು ಮಂದಿ ಉಗ್ರರು ಕ್ಯಾಪ್ಟನ್ ಮತ್ತು ಸುಬೇದಾರ್ ದರ್ಜೆಯ ಸಮವಸ್ತ್ರವನ್ನು ಧರಿಸಿರುವ ಮಾಹಿತಿ ಇದ್ದಿರುವುದಾಗಿ ಇಲಾಖೆ ವಿವರಿಸಿದೆ. 7 ಮಂದಿ ಶಂಕಿತ ಉಗ್ರರು ಛಾಕ್ರಿ ಹೊರವಲಯ ಮತ್ತು ಗುರುದಾಸ್ ಪುರ್ ಗಡಿಭಾಗದಲ್ಲಿ ಕಾಣಿಸಿಕೊಂಡಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಅವರೆಲ್ಲರೂ ಭಾರತೀಯ ಸೇನೆಯ ಸಮವಸ್ತ್ರವನ್ನು ಧರಿಸಿದ್ದಾರೆ. ಬಹುಶಃ ಅವರು ಗಡಿ ನುಸುಳಿ ಒಳಗೆ ಆಗಮಿಸಿದ ನಂತರ ಸಮವಸ್ತ್ರ ಧರಿಸಿರಬೇಕೆಂದು ಶಂಕಿಸಲಾಗಿದೆ. ಆ ನಿಟ್ಟಿನಲ್ಲಿ ಪಂಜಾಬ್ ಹಾಗೂ ದೆಹಲಿ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಿರುವುದಾಗಿ ವರದಿ ತಿಳಿಸಿದೆ.

ಜನವರಿ 26ರಂದು ಗಣರಾಜ್ಯೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿಯೂ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಸಿಐಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next