ನವದೆಹಲಿ: ದೆಹಲಿಯ ವಾಯು ಮಾಲಿನ್ಯ ಪರಿಸ್ಥಿತಿ ಮತ್ತೆ ಗಂಭೀರವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಶಾಲಾಕಾಲೇಜುಗಳನ್ನು ಅನಿರ್ದಿಷ್ಟವಾಧಿವರೆಗೆ ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ. ಈ ವಿಚಾರವನ್ನು ದೆಹಲಿಯ ಪರಿಸರ ಖಾತೆ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ದೆಹಲಿಯ ಮಾಲಿನ್ಯದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಇತ್ತೀಚೆಗೆ ತಾತ್ಕಾಲಿಕವಾಗಿ (ನ. 13-28) ಮುಚ್ಚಲಾಗಿತ್ತು. ಆಗ, ದೆಹಲಿಯಲ್ಲಿನ ವಾಯುಮಾಲಿನ್ಯ.
ಹವಾಮಾನ ಇಲಾಖೆ ವಾತಾವರಣ ಸುಧಾರಿಸುತ್ತದೆ, ಮಾಲಿನ್ಯ ಇಳಿಯುತ್ತದೆ ಎಂದು ಮುನ್ಸೂಚನೆ ನೀಡಿತ್ತು. ಹಾಗಾಗಿ, ಶಾಲಾಕಾಲೇಜುಗಳನ್ನು ನ. 29ರಿಂದ ಪುನಾರಂಭಿಸಲಾಗಿತ್ತು.
ಇದನ್ನೂ ಓದಿ:ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್‌ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ
ಆದರೆ ಪರಿಸ್ಥಿತಿ ಸುಧಾರಿಸುವುದರ ಬದಲು, ಮಾಲಿನ್ಯ ಇನ್ನಷ್ಟು ಹೆಚ್ಚಿದೆ. ಇದರಿಂದ ಆತಂಕಿತವಾಗಿರುವ ದೆಹಲಿ ಸರ್ಕಾರ ಮತ್ತೆ ಹಳೆಯಸ್ಥಿತಿಗೆ ಮರಳಿದೆ. ಇದರ ಜೊತೆಗೆ ಕೊರೊನಾ ಒಮಿಕ್ರಾನ್ ಭೀತಿಯೂ ಆವರಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಲು ಆರಂಭಿಸಿದ್ದಾರೆ.
ಹಾಗಾಗಿ, ಶಾಲಾ-ಕಾಲೇಜುಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.