Advertisement

ಬಿ.ರಂ.ಬೆಟ್ಟದ ನೆಲಹಾಸು ಕಾಮಗಾರಿ ವಿಳಂಬ: ಭಕ್ತರಿಗೆ ತೊಂದರೆ

12:54 PM Nov 14, 2021 | Team Udayavani |

ಯಳಂದೂರು: ಹಳೇ ಮೈಸೂರು ಭಾಗದ ಪ್ರಸಿದ್ಧ ಪೌರಾಣಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ನೆಲಹಾಸು ಕಾಮಗಾರಿ ಮಂದಗತಿಯಲ್ಲಿ ಅರ್ಧಂಬರ್ಧವಾಗಿ ಕೆಲಸವು ಸಾಗುತ್ತಿದ್ದು, ಭಕ್ತರು ದರ್ಶನಕ್ಕೆ ಪರದಾ ಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರವಾಸ್ಯೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಗೊಂಡು ಹಲವು ತಿಂಗಳುಗಳೇ ಕಳೆದಿವೆ. ಆದರೆ ಕೋವಿಡ್‌, ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಕಾಮಗಾರಿ ಭರ ದಿಂದ ಸಾಗಿತ್ತು. ನಂತರ ರಾಷ್ಟ್ರಪತಿಗಳು ಕಾರ್ಯ ಕ್ರಮದ ಮುಗಿದ ತಕ್ಷಣ ಅಭಿವೃದ್ಧಿ ಕಾಮಗಾರಿಯು ಪೂರ್ಣವಾಗಿ ಪ್ರಗತಿ ಕಂಡಿಲ್ಲ.

ಇದನ್ನೂ ಓದಿ:- ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ: ಸಾರ್ವಜನಿಕರಲ್ಲಿ ಆತಂಕ

ಈಗ ಹಬ್ಬಗಳು ಸಾಲು ರಜೆಗಳ ಸರತಿ ಸಾಲಿನಲ್ಲಿವೆ. ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಗುಲದ ಪ್ರಾಂಗಣದಲ್ಲಿ ಕಲ್ಲು ಮಣ್ಣು, ಎಂ ಸ್ಯಾಂಡ್‌ ಸುರಿಯಲಾಗಿದೆ. ಈಗ ಮಳೆಯೂ ಸುರಿಯುತ್ತಿದೆ. ಇದನ್ನೇ ತುಳಿದು, ದಾಟಿಕೊಂಡು ಹೋಗುವುದು ಪ್ರಯಾಸದ ಕೆಲಸವಾಗಿದೆ. ವೃದ್ಧರು ಹಾಗೂ ಮಕ್ಕಳು ಓಡಾಡಲು ಪರದಾಡುವ ಪರಿಸ್ಥಿತಿ ಇದೆ. ಸ್ವಲ್ಪ ಆಯ ತಪ್ಪಿದರೂ ಜಾರಿ ಬೀಳುವ ಸಂಭವವಿದೆ.

ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಇದಕ್ಕೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಿ ಈ ಕೆಲಸವನ್ನು ಬೇಗ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಭಕ್ತರಾದ ನಾರಾಯಣಸ್ವಾಮಿ ಸೇರಿದಂತೆ ಹಲವರ ಆಗ್ರಹವಾಗಿದೆ.

Advertisement

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಅ.7 ರಂದು ರಾಷ್ಟ್ರಪತಿಗಳ ಬಿಳಿಗಿರರಿರಂಗನಬೆಟ್ಟ ಆಗ ಮನ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಟ್ಟದಲ್ಲಿನ ರಸ್ತೆ, ಕುಡಿಯುವ ನೀರು, ಸ್ವತ್ಛತೆ, ಕಟ್ಟಡಗಳಿಗೆ ಸುಣ್ಣ ಬಣ್ಣ ದುರಸ್ತಿ ಭಾಗ್ಯ ಸೇರಿದಂತೆ ಸಾಕಷ್ಟು ಕೆಲಸ ಗಳನ್ನು ಕೈಗೊಂಡಿದ್ದರು. ರಾಷ್ಟ್ರಪತಿ ಹೋದ ಬಳಿಕ ಬೆಟ್ಟದ ಅಭಿವೃದ್ಧಿ ಬಗ್ಗೆ ಯಾರು ಕೂಡ ಗಮನ ಹರಿಸುತ್ತಿಲ್ಲ. ಇದರಿಂದ ಇಲ್ಲಿನ ರಸ್ತೆ, ಪ್ರವಾಸಿ ಮಂದಿರ ದುರಸ್ತಿ ಸೇರಿದಂತೆ ಸಾಕಷ್ಟ ಕಾಮಗಾರಿ ಗಳು ಗುಣಮಟ್ಟದಿಂದ ಮಾಡಿಲ್ಲ ಜತೆಗೆ ನೆಲಸ ಹಾಸು ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ.

“ಬಿಳಿಗಿರಿರಂಗಬೆಟ್ಟ ದೇಗುಲದ ಆವರಣದಲ್ಲಿ ನೆಲಹಾಸು ಕಾಮಗಾರಿಯು ಸತತ ಮಳೆಯಾಗುತ್ತಿರುವ ಕಾರಣ ಕಾಮಗಾರಿ ನಿಲ್ಲಿಸ ಲಾಗಿದ್ದು, ಕಡಿಮೆಯಾದ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.”

–   ಶಿವನಂದ್‌, ಜೆಇ, ಪುರಾತತ್ವ ಇಲಾಖೆ ಮೈಸೂರು

 “ಕೋವಿಡ್‌ ಹಿನ್ನೆಲೆಯಲ್ಲಿ ದೇಗುಲದ ನೆಲಹಾಸು ಕಾಮಗಾರಿ ವಿಳಂಬವಾಗಿತ್ತು. ಇದರೊಂದಿಗೆ ಮಳೆಯೂ ಆಗಾಗ ಬೀಳುತ್ತಿರುವ ಪರಿಣಾಮ ಕಾಮಗಾರಿಯು ಸ್ಥಗಿತಗೊಂಡಿದೆ. ಸಂಬಂಧಪಟ್ಟ ಇಲಾಖೆಯವರಿಗೆ ಸೂಚಿಸಿ ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗುವುದು.” – ಮೋಹನ್‌ಕುಮಾರ್‌, ಇಒ ಬಿಳಿಗಿರಿರಂಗನಾಥಸ್ವಾಮಿ ದೇಗುಲ

 

  • – ಫೈರೋಜ್‌ಖಾನ್‌
Advertisement

Udayavani is now on Telegram. Click here to join our channel and stay updated with the latest news.

Next