Advertisement

ಉಡುಪಿ ಜಿಲ್ಲೆಯಲ್ಲಿ ಭೂಮಿ ಸರ್ವೇಗೆ ಗ್ರಹಣ

01:27 PM Nov 08, 2020 | mahesh |

ಉಡುಪಿ, ನ. 7: ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಳೆದೆರಡು ತಿಂಗಳಿನಿಂದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಭೂ ಸರ್ವೇ ಕೆಲಸ ಮಂದಗತಿಯಲ್ಲಿ ಸಾಗುತ್ತಿದ್ದು, ಸಾವಿರಾರು ಅರ್ಜಿಗಳು ಸರ್ವೇ ನಡೆಸಲು ಬಾಕಿ ಉಳಿದಿವೆ.

Advertisement

ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಭೂಮಿ ಸರ್ವೇ ಕಾರ್ಯ ಆಮೆ ನಡಿಗೆ ಯಲ್ಲಿದೆ. ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸು ತ್ತಿರುವ ಮಾಲಕರಿಗೆ ಮತ್ತೂಂದು ಕಂಟಕ ಎದುರಾಗಿದೆ. ಕೋವಿಡ್‌-19 ಬಳಿಕ ಭೂಮಿ ಮಾರಾಟ, ವಿಭಾಗ ಪತ್ರ ಸೇರಿದಂತೆ ವಿವಿಧ ಕೆಲಸಗಳಿಗೆ ಬೇಕಾಗಿರುವ ಮುಖ್ಯ ಸರ್ವೇ ಕೆಲಸಕ್ಕೆ ಗ್ರಹಣ ಹಿಡಿದಿದೆ.

ಉಡುಪಿ ಜಿಲ್ಲೆಯಲ್ಲಿ ಈ ವರೆಗೆ ಕುಂದಾಪುರ 3,460, ಉಡುಪಿ 1,757, ಕಾರ್ಕಳ 1,600, ಬ್ರಹ್ಮಾವರ 2,082, ಕಾಪು 1,525 , ಹೆಬ್ರಿ 654, ಬೈಂದೂರು 2,389 ಅರ್ಜಿಗಳು ಸರ್ವೇಗೆ ಬಾಕಿ ಇವೆ. ಅಕ್ಟೋಬರ್‌ ತಿಂಗಳಿನಲ್ಲಿ 3,660 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 2,865 ಅರ್ಜಿಗಳ ಸರ್ವೇ ಕಾರ್ಯ ರ್ಪೂಗೊಂಡಿವೆ.

ಬಾಕಿ ಯಾಕೆ? : ಜಿಲ್ಲೆಯಲ್ಲಿ ಸರಕಾರದ 25, ಖಾಸಗಿ 49 ಸರ್ವೇದಾರರಿದ್ದಾರೆ. ಪ್ರಸ್ತುತ ಡಿಜಿಟಲ್‌ ಆಕಾರ್‌ ಬಂದ್‌ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ಸಿಬಂದಿ ಸರ್ವೇ ಜತೆ ಜತೆಗೆ ಆಕಾರ್‌ ಬಂದ್‌ ಡಿಜಿಟಲೀಕರಣ ಕೆಲಸ ವನ್ನು ಮಾಡುತ್ತಿರುವುದರಿಂದ ತಿಂಗಳ ಅರ್ಜಿಗಳು ಬಾಕಿಯಾಗುತ್ತಿದೆ ಎಂದು ಸಿಬಂದಿ ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿ ಏರಿಕೆ :  ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಬಳಿಕ ಸರ್ವೇಗೆ ಅರ್ಜಿ ಹಾಕು ವವರ ಸಂಖ್ಯೆ ಶೇ. 80ರಷ್ಟು ಏರಿಕೆಯಾಗಿದೆ.ಬೇರೆ ಬೇರೆ ಕಡೆಗಳಿಂದ ಜಿಲ್ಲೆಗೆ ಆಗಮಿಸುವವರಲ್ಲಿ ಕೆಲವರು ಜಾಗದ ಮಾರಾಟ ಸೇರಿದಂತೆ ಇತರ ಕೆಲಸಗಳಿಗೆ ಅರ್ಜಿಯನ್ನು ಹಾಕುತ್ತಿದ್ದಾರೆ. ಇದರಿಂದ ಇವುಗಳ ಸಂಖ್ಯೆ ಏಕಾಏಕಿಯಾಗಿ ಏರಿಕೆಯಾಗಿದೆ. ಸಾಮಾನ್ಯವಾಗಿ ನವೆಂಬರ್‌ ಬಳಿಕ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುತ್ತದೆ.

Advertisement

ಹೊಸ ತಾಲೂಕುಗಳಿಗೆ ಸಮಸ್ಯೆ :  ಜಿಲ್ಲೆಯ ಹೊಸ ತಾಲೂಕು ಸೇರಿದಂತೆ ಇತರ ತಾಲೂಕುಗಳಿಗೆ ಹೊಸದಾಗಿ ಸರ್ವೇ ದಾರರ ನೇಮಕವಾಗಿಲ್ಲ. ಇತರ ತಾಲೂಕಿನ ವರನ್ನು ಹೊಸ ತಾಲೂಕಿಗೆ ನಿಯುಕ್ತಿ ಗೊಳಿಸಲಾಗಿದೆ. ಅರ್ಜಿಗಳನ್ನು ವಿಲೇವಾರಿ ಮಾಡಲು ಇದೀಗ ತಿಂಗಳು ಹಿಡಿಯ್ತುವೆ.

ಹೆಚ್ಚಿದ ಒತ್ತಡ :  ತಿಂಗಳಿಗೆ ಸರಕಾರಿ ನಿಯಮಾನುಸಾರ ಒಬ್ಬ ಸರಕಾರಿ ಸರ್ವೇದಾರರ ಸರಾಸರಿ 23 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಆದರೆ ಪ್ರಸ್ತುತ ಕೆಲಸದ ಒತ್ತಡದಿಂದ ತಿಂಗಳಿಗೆ ಸರಕಾರಿ ಸರ್ವೇದಾರರು 35ರ ವರೆಗೆ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

ವರ್ಗಾವಣೆಗೆ ಉತ್ಸಾಹ :  ರಾಜ್ಯದಲ್ಲಿ ಸರ್ವೇದಾರರ ಕೊರತೆ ಇದೆ. ಕಳೆದ ವರ್ಷ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಇಲಾಖೆಯಿಂದ ಆಹ್ವಾನಿಸಲಾಗಿತ್ತು. ಪರೀಕ್ಷೆ ದಿನ ನಿಗದಿ ಯಾಗಿತ್ತು. ಆದರೆ ಕೋವಿಡ್‌ನಿಂದಾಗಿ ಪರೀಕ್ಷೆ ರದ್ದಾಗಿದೆ. ಜಿಲ್ಲೆಯಲ್ಲಿ ಸರ್ವೇದಾರ ರಾಗಿ ಆಯ್ಕೆಯಾಗುವ ಇತರ ಜಿಲ್ಲೆಯವರು ವರ್ಷವಾಗುವುದರೊಳಗಾಗಿ ವರ್ಗಾವಣೆ ಯಾಗುತ್ತಿರುವುದರಿಂದ ಸರ್ವೇದಾರರ ಸಂಖ್ಯೆ ಕಡಿಮೆ ಇದೆ.

ಅರ್ಜಿಗಳ ಸಂಖ್ಯೆ ಹೆಚ್ಚಳ : ಜಿಲ್ಲೆಯಲ್ಲಿ ಪ್ರಸ್ತುತ ಭೂಮಿಸರ್ವೇಗೆ ಅರ್ಜಿಗಳಸಂಖ್ಯೆ ಇದೀಗ ಹೆಚ್ಚಿದೆ.ಇನ್ನೂ ಹೊಸದಾಗಿ ಘೋಷಣೆಯಾದ ತಾಲೂಕುಗಳಿಗೆ ಬೇರೆ ತಾಲೂಕಿನ ಸರ್ವೇದಾರರನ್ನುನಿಯುಕ್ತಿಗೊಳಿಸಲಾಗಿದೆ. -ರವೀಂದ್ರ, ಭೂ ದಾಖಲೆ ಉಪ ನಿರ್ದೇಶಕ ಉಡುಪಿ

 

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next