ಕೆವಾಡಿಯ : ನ್ಯಾಯ ಪಡೆಯುವಲ್ಲಿ ವಿಳಂಬವಾಗುವುದು ದೇಶದ ಜನರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ . ಸಮರ್ಥ ರಾಷ್ಟ್ರ ಮತ್ತು ಸಾಮರಸ್ಯ ಸಮಾಜಕ್ಕೆ ಸೂಕ್ಷ್ಮ ನ್ಯಾಯಾಂಗ ವ್ಯವಸ್ಥೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ :ಬೆಂಗಳೂರಿಗೆ ಬರುತ್ತಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ; ಮುಂಬಯಿಗೆ ವಾಪಾಸ್
ಗುಜರಾತ್‌ನ ಕೆವಾಡಿಯಾದ ಏಕತಾ ನಗರದಲ್ಲಿ ‘ಏಕತಾ ಪ್ರತಿಮೆ’ ಬಳಿಯ ಎರಡು ದಿನಗಳ ‘ಕಾನೂನು ಮಂತ್ರಿಗಳು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಮ್ಮೇಳನ’ದ ಉದ್ಘಾಟನಾ ಅಧಿವೇಶನದಲ್ಲಿ ಪ್ರಸಾರವಾದ ತಮ್ಮ ವಿಡಿಯೋ ಸಂದೇಶದಲ್ಲಿ ಮೋದಿ ಅವರು ಕಳೆದ ಎಂಟು ವರ್ಷಗಳಲ್ಲಿ, ನಮ್ಮ ಸರಕಾರವು 1,500 ಕ್ಕೂ ಹೆಚ್ಚು ಹಳೆಯ, ಬಳಕೆಯಲ್ಲಿಲ್ಲದ ಮತ್ತು ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿದೆ, ಅವುಗಳಲ್ಲಿ ಹಲವು ಬ್ರಿಟಿಷ್ ಆಳ್ವಿಕೆಯ ಕಾಲದಿಂದ ಮುಂದುವರಿದಿದ್ದವು ಎಂದು ಹೇಳಿದರು.
ಕಾನೂನಿನ ಅಸ್ಪಷ್ಟತೆಯು ಸಂಕೀರ್ಣತೆಯನ್ನು ಸೃಷ್ಟಿಸುವುದರಿಂದ, ಹೊಸ ಕಾನೂನುಗಳನ್ನು ಸ್ಪಷ್ಟವಾದ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯವನ್ನು ಸುಲಭವಾಗಿ ತರಬೇಕು, ಇದರಿಂದ ಬಡ ನಾಗರಿಕರು ಸಹ ಅವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು, ಕಾನೂನಿಗೆ ಭಾಷೆಯು ಅಡ್ಡಿಯಾಗಬಾರದು ಎಂದು ಹೇಳಿದರು.