Advertisement

ಸೆಮಿಫೈನಲ್‌ ಪ್ರವೇಶಿಸಿದ ಡೆಲ್‌ ಪೊಟ್ರೊ 

06:05 AM Mar 03, 2018 | Team Udayavani |

ಅಕಪುಲ್ಕೊ (ಮೆಕ್ಸಿಕೊ): ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಮೆಕ್ಸಿಕನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್‌ ತಲುಪಿದ್ದಾರೆ.

Advertisement

ಗುರುವಾರ ರಾತ್ರಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅವರು ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ವಿರುದ್ಧ 6-2, 7-6 (7) ಅಂತರದ ಜಯ ಸಾಧಿಸಿದರು. ಇದರೊಂದಿಗೆ ಥೀಮ್‌ ವಿರುದ್ಧ ಆಡಿದ ಎಲ್ಲ 4 ಪಂದ್ಯಗಳಲ್ಲಿ ಡೆಲ್‌ ಪೊಟ್ರೊ ಗೆಲುವು ಕಂಡಂತಾಯಿತು.

ಡೆಲ್‌ ಪೊಟ್ರೊ ಅವರ ಸೆಮಿಫೈನಲ್‌ ಎದುರಾಳಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌. ದಿನದ ಇನ್ನೊಂದು ಪಂದ್ಯದಲ್ಲಿ ಜ್ವೆರೇವ್‌ ಅಮೆರಿಕದ ರಿಯಾನ್‌ ಹ್ಯಾರಿಸನ್‌ ಅವರನ್ನು 6-4, 6-1 ಅಂತರದಿಂದ ಮಣಿಸಿದರು.

ಇನ್ನೊಂದು ಸೆಮಿಫೈನಲ್‌ ಪಂದ್ಯ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಮತ್ತು ಅಮೆರಿಕದ ಜೇರ್ಡ್‌ ಡೊನಾಲ್ಡ್‌ಸನ್‌ ನಡುವೆ ಸಾಗಲಿದೆ. ಆ್ಯಂಡರ್ಸನ್‌ ದಕ್ಷಿಣ ಕೊರಿಯಾದ ಹಿಯಾನ್‌ ಚುಂಗ್‌ ಅವರನ್ನು 7-6 (5), 6-4 ಅಂತರದಿಂದ, ಡೊನಾಲ್ಡ್‌ಸನ್‌ ಸ್ಪೇನಿನ ಫೆಲಿಶಿಯಾನೊ ಲೋಪೆಜ್‌ ಅವರನ್ನು 6-3, 6-1ರಿಂದ ಮಣಿಸಿದರು.

ರಮೋಸ್‌ ವಿನೊಲಾಸ್‌ ಮುನ್ನಡೆ
ಸಾವೋ ಪೌಲೊ:
ಇಲ್ಲಿ ಸಾಗುತ್ತಿರುವ ಬ್ರಝಿಲ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ಸ್ಪೇನ್‌ ಆಟಗಾರ ಆಲ್ಬರ್ಟ್‌ ರಮೋಸ್‌ ವಿನೊಲಾಸ್‌ ಕ್ವಾರ್ಟರ್‌ ಫೈನಲಿಗೆ ಮುನ್ನಡೆದಿದ್ದಾರೆ. ಅವರು ತವರಿನ ಟೆನಿಸಿಗ ಗಿಲೆರ್ಮ್ ಕ್ಲೆಝರ್‌ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. ವಿನೊಲಾಸ್‌ ಅವರ ಮುಂದಿನ ಸುತ್ತಿನ ಎದುರಾಳಿ ಚಿಲಿಯ ನಿಕೋಲಸ್‌ ಜರ್ರಿ. ಆರ್ಜೆಂಟೀನಾದ 6ನೇ ಶ್ರೇಯಾಂಕಿತ ಆಟಗಾರ ಗಿಡೊ ಪೆಲ್ಲ ವಿರುದ್ಧ ಜರ್ರಿ 6-7 (2), 6-4, 7-6ರಿಂದ ಗೆದ್ದು ಬಂದರು.

Advertisement

ಇನ್ನೊಂದು ಪಂದ್ಯದಲ್ಲಿ ಆರ್ಜೆಂಟೀನಾದ ಹೊರಾಸಿಯೊ ಝೆಬೆಲ್ಲೊ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಅವರನ್ನು 6-3, 6-3, 6-3ರಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next