Advertisement

ಇಂದು, ನಾಳೆ ರಕ್ಷಣಾ ಇಲಾಖೆಯಿಂದ ಚಿಂತನ ಶಿಬಿರ

10:20 PM Jun 18, 2023 | Shreeram Nayak |

ನವದೆಹಲಿ: ರಕ್ಷಣಾ ಇಲಾಖೆಯಿಂದ ಸೋಮವಾರ, ಮಂಗಳವಾರ ನವದೆಹಲಿಯಲ್ಲಿ 2 ದಿನಗಳ ಅತೀ ಮಹತ್ವದ “ಚಿಂತನ ಶಿಬಿರ’ ನಡೆಯಲಿದೆ.

Advertisement

ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು, ಆಗಬೇಕಾದ ಬದಲಾವಣೆಗಳ ಕುರಿತು ತುರುಸಿನ ಚರ್ಚೆಗಳಾಗುತ್ತವೆ. ರಕ್ಷಣಾ ಇಲಾಖೆ, ರಕ್ಷಣಾ ಸಾಧನ ಉತ್ಪಾದನಾ ಇಲಾಖೆ, ಸೇನಾ ಕಾರ್ಯಾಚರಣೆ, ಮಾಜಿ ಯೋಧರು ಸೇರಿಕೊಂಡು ಹಲವು ಸಂಗತಿಗಳನ್ನು ನಿರ್ಧರಿಸಿದ್ದಾರೆ. ಈ ಬಗ್ಗೆ ತಜ್ಞರು ತಮ್ಮ ಆಳವಾದ ಅಭಿಪ್ರಾಯಗಳನ್ನು ನೀಡಲಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಸಮಗ್ರ ಯೋಜನೆ, ಸೈಬರ್‌ ಭದ್ರತೆಗೆ ಇರುವ ಸವಾಲುಗಳು, ರಾಷ್ಟ್ರೀಯ ಮಾಹಿತಿ ಭದ್ರತಾ ನೀತಿ, ಮಾರ್ಗದರ್ಶಿ ಸೂತ್ರಗಳು, ಸೇನಾ ಶಾಲಾಶಿಕ್ಷಣ ಪದ್ಧತಿಗಳಂತಹ ವಿಷಯಗಳು ಇಲ್ಲಿ ಚರ್ಚೆಗೆ ಬರಲಿವೆ. ದೇಶೀಯವಾಗಿ ರಕ್ಷಣಾ ಸಾಧನಗಳ ಉತ್ಪಾದನೆ ಹೆಚ್ಚಳ, ರಫ್ತು ಹೆಚ್ಚಳ, ರಕ್ಷಣೆಯಲ್ಲಿ ಆತ್ಮನಿರ್ಭರತೆ, ಉದ್ಯಮ ಸ್ಥಾಪನೆ, ಕುಶಲ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುವುದೂ ಪಟ್ಟಿಯಲ್ಲಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next