Advertisement

ಸೇನಾ ಪಡೆಗಳಿಗೆ ಸೈಬರ್‌ ತಂತ್ರಜ್ಞಾನದ ಬಲ ಅವಶ್ಯ: ಅಧ್ಯಯನ ವರದಿ

09:14 AM Apr 01, 2019 | Hari Prasad |

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಹ್ಯ ಮತ್ತು ಆಂತರಿಕ ಶಕ್ತಿಗಳಿಂದ ಸೈಬರ್‌ ಬೆದರಿಕೆಗಳು ಹೆಚ್ಚಾಗುತ್ತಿರುವಂತೆಯೇ ಭಾರತ ತನ್ನ ಸೇನಾ ಪಡೆಗಳ ಸೈಬರ್‌ ಸಾಮರ್ಥ್ಯವನ್ನು ಹೆಚ್ಚಿಸಲೇಬೇಕಾದ ಅಗತ್ಯತೆಯೊಂದನ್ನು ಇತ್ತೀಚಿನ ಅಧ್ಯಯನ ವರದಿಯೊಂದು ಬಹಿರಂಗಗೊಳಿಸಿದೆ. ಇದರಲ್ಲಿ ಭದ್ರತಾ ಸೈಬರ್‌ ಏಜನ್ಸಿಯೊಂದರ ಸ್ಥಾಪನೆಯ ಪ್ರಸ್ತಾವನೆಯೂ ಸಹ ಸೇರಿದೆ. ‘ವಿಶ್ವಾಸಾರ್ಹ ಸೈಬರ್‌ ನಿರೋಧಕತೆ’ ಎಂಬ ಶೀರ್ಷಿಕೆಯಲ್ಲಿ ಬಹಿರಂಗಗೊಂಡಿರುವ ಅಧ್ಯಯನ ವರದಿಯೊಂದು, ನಮ್ಮ ಸೇನಾ ಪಡೆಗಳಲ್ಲಿ ಆತ್ಯಾಧುನಿಕ ಸೈಬರ್‌ ತಂತ್ರಜ್ಞಾನದ ಅಳವಡಿಕೆ ಹಾಗೂ ಅವುಗಳ ಸೂಕ್ತರೀತಿಯ ಬಳಕೆಯ ಅಗತ್ಯತೆಯನ್ನು ಒತ್ತಿ ಹೇಳಿದೆ.

Advertisement

ಭಾರತೀಯ ಸೇನಾಪಡೆಗಳ ಸೈಬರ್‌ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಲು ಪ್ರಮುಖ ಏಳು ಅಂಶಗಳನ್ನು ಈ ಅಧ್ಯಯನ ವರದಿಯು ಗುರುತಿಸಿದೆ. ಇದರ ಪ್ರಥಮ ಹಂತವಾಗಿ ‘ಭದ್ರತಾ ಸೈಬರ್‌ ಏಜನ್ಸಿ’ಯೊಂದನ್ನು ನಿರ್ಧಿಷ್ಟ ಕಾಲಮಿತಿಯಲ್ಲಿ ಅಭಿವೃದ್ಧಿಗೊಳಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next