ಹೊಸದಿಲ್ಲಿ: ಜಮ್ಮು -ಕಾಶ್ಮೀರದಲ್ಲಿರುವ ಎಲ್‌ಒಸಿ, ಭಾರತ ಮತ್ತು ಚೀನ ನಡುವಿನ ಇರುವ 4 ಸಾವಿರ ಕಿ.ಮೀ. ಗಡಿಯಲ್ಲಿ ಬಿಗುವಿನ ವಾತಾವರಣ ಇರುವಾಗಲೇ ರಕ್ಷಣಾ ಖರೀದಿ ಮಂಡಳಿ ಬರೋಬ್ಬರಿ 15,935 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವಕ್ಕೆ ಮಂಗಳವಾರ ಅನುಮೋದನೆ ನೀಡಿದೆ. ಅದರಲ್ಲಿ ಅಸಾಲ್ಟ್ ರೈಫಲ್‌ಗಳೂ ಸೇರಿವೆ. ಒಟ್ಟು 7.4 ಲಕ್ಷ ಅಸಾಲ್ಟ್ ರೈಫಲ್‌ಗಳನ್ನು ಖರೀದಿಸಲು ಉದ್ದೇಶಿಸ ಲಾಗಿದೆ. ಅದಕ್ಕಾಗಿಯೇ 12,280 ಕೋಟಿ ರೂ. ವೆಚ್ಚವಾಗಲಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗಿದೆ. ಗಮನಾರ್ಹ ಅಂಶವೆಂದರೆ ಒಂದಷ್ಟು ರೈಫಲ್‌ಗಳನ್ನು ಖರೀದಿಸಿ ಉಳಿದವನ್ನು “ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಸರಕಾರಿ ಸ್ವಾಮ್ಯದ ಆರ್ಡಿನೆನ್ಸ್ ಫ್ಯಾಕ್ಟರಿ ಮತ್ತು ಖಾಸಗಿ ಸಂಸ್ಥೆಗಳು ಉತ್ಪಾದಿಸಲಿವೆ. ಲೈಟ್ ಮೆಷಿನ್ ಗನ್ (ಎಲ್‌ಎಂಜಿ) ಗಳನ್ನು ಶೀಘ್ರಾತಿ ಶೀಘ್ರ ಖರೀದಿಗೆ ಒಪ್ಪಿಗೆ ಸೂಚಿಸ ಲಾಗಿದೆ. ಅದಕ್ಕಾಗಿ 1,819 ಕೋಟಿ ರೂ. ನಿಗದಿಪಡಿಸಲಾಗಿದೆ.
ಬೆಂಗಳೂರಿನಲ್ಲಿ ಉತ್ಪಾದನೆ: ನೌಕಾಪಡೆಗೆ ಅಡ್ವಾನ್ಸ್$x ಟ್ರೊಪೆಡೋ ಡೆಕಾಯ್ ಸಿಸ್ಟಮ್ (ಎಟಿಡಿಎಸ್) ಅನ್ನು 850 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತದೆ. “ಮಾರೀಚ್’ ಎಂಬ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಂದಾಗಿದೆ. ಅದನ್ನು ಬೆಂಗಳೂರಿನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಉತ್ಪಾದಿಸಲಿದೆ.
ಯಾವುದಕ್ಕೆ ಎಷ್ಟೆಷ್ಟು?
15,935 ಕೋಟಿ ರೂ- ಒಟ್ಟು ಖರೀದಿ ಮೊತ್ತ
7.4 ಲಕ್ಷ – ಖರೀದಿ ಮಾಡಲಿರುವ ಅಸಾಲ್ಟ್ ರೈಫಲ್ಸ್
12,280 ಕೋ.ರೂ.- ಅದಕ್ಕೆ ನಿಗದಿತ ಮೊತ್ತ
5,719- ಭೂಸೇನೆ, ಐಎಎಫ್ಗೆ ಸ್ನೆ„ಪರ್ ರೈಫಲ್ಸ್
982 ಕೋಟಿ ರೂ.- ಅದಕ್ಕೆ ಬೇಕಾಗುವ ವೆಚ್ಚ
1,819 ಕೋಟಿ ರೂ.- ಎಲ್‌ಎಂಜಿ ಖರೀದಿ ವೆಚ್ಚ