Advertisement

ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರ : ಸಚಿವ ರಾಜನಾಥ ಸಿಂಗ್

06:10 PM Jan 12, 2021 | Team Udayavani |

ಪಣಜಿ: ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ರವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಗೋವಾ ಬಾಂಬೋಲಿಂ ಆಸ್ಪತ್ರೆಯ ವೈದ್ಯರೊಂದಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸತತವಾಗಿ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ಚಿಕಿತ್ಸೆಯನ್ನೂ ಅವರ ಮಾರ್ಗದರ್ಶನದಲ್ಲಿ ಗೋವಾದಲ್ಲಿಯೇ ನೀಡಲಿದ್ದಾರೆ. ಅಗತ್ಯಬಿದ್ದರೆ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾಹಿತಿ ನೀಡಿದರು.

Advertisement

ಮಂಗಳವಾರ ಮಧ್ಯಾಹ್ನ ದೆಹಲಿಯಿಂದ ಗೋವಾಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ರವರು ಬಾಂಬೋಲಿಂ ಆಸ್ಪತ್ರೆಗೆ ತೆರಳಿ ಶ್ರೀಪಾದ ನಾಯ್ಕ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಶ್ರೀಪಾದ ನಾಯ್ಕ ರವರಿಗೆ ಗೋವಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಯಲಿದೆ. ಇಲ್ಲಿನ ವೈದ್ಯರು ಸಮಯಕ್ಕೆ ತಕ್ಕಂತೆಯೇ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ, ಇದಕ್ಕೆ ಬಾಂಬೋಲಿಂ ವೈದ್ಯರ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಶ್ರೀಪಾದ ನಾಯ್ಕ ರವರನ್ನು ದೆಹಲಿಗೆ ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ ಎಂದು ಅನ್ನಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಪಾದ ನಾಯ್ಕ ರವರಿಗೆ ಅಪಘಾತವಾಗಿರುವ ವಿಷಯ ತಿಳಿದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದೇನೆ. ಪ್ರಧಾನಿಗಳು ಕೂಡ ಗೋವಾ ಸಿಎಂ ಜೊತೆ ಮಾತನಾಡಿದ್ದಾರೆ.

Advertisement

ಇದನ್ನೂ ಓದಿ:ಮುಂಬೈ ಷೇರುಪೇಟೆ; ಕುಸಿತ ಕಂಡು ದಾಖಲೆಯ ಏರಿಕೆಯೊಂದಿಗೆ ವಹಿವಾಟು ಅಂತ್ಯ

ಪ್ರಧಾನಿಗಳು ನನಗೆ ದೂರವಾಣಿ ಕರೆ ಮಾಡಿ ನೀವೆ ಸ್ವತಃ ಗೋವಾಕ್ಕೆ ತೆರಳಿ ಶ್ರೀಪಾದ ನಾಯ್ಕರ ಆರೋಗ್ಯ ವಿಚಾರಿಸಲು ಸೂಚಿಸಿದ್ದರು. ನಾನು ಕೂಡ ಇದೇ ರೀತಿ ಯೋಚಿಸಿದ್ದೆ. ಈ ಹಿನ್ನೆಲೆಯಲ್ಲಿ ನೇರವಾಗಿ ಗೋವಾಕ್ಕೆ ಆಗಮಿಸಿದ್ದಾಗಿ ಹೇಳಿದ್ದಾರೆ.   ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next