ಕರವತ್ತಿ: ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಇದೇ ಮೊದಲ ಬಾರಿಗೆ ನಿರ್ಮಿಸಲಾಗಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಶನಿವಾರ ರಕ್ಷಣ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ.
ಮಹಾತ್ಮಾ ಅವರ 152ನೇ ಜನ್ಮದಿನದಂದೇ ಈ ಕಾರ್ಯಕ್ರಮ ನಡೆದದ್ದು ವಿಶೇಷ. ಈ ಬಗ್ಗೆ ರಕ್ಷಣ ಸಚಿವರ ಕಾರ್ಯಾಲಯ ಟ್ವೀಟ್ ಮಾಡಿದೆ. ಇದೇ ಸಂದರ್ಭದಲ್ಲಿ ಸಚಿವರು ಮಹಾತ್ಮಾ ಪ್ರತಿಮೆಗೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು.
ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಸಚಿವ ರಾಜ ನಾಥ್ ಸಿಂಗ್ “ಕೇಂದ್ರ ಸರಕಾರ ಲಕ್ಷದ್ವೀಪವನ್ನು ಭಾರತದ ಮಾಲ್ಡೀವ್ಸ್‌ನಂತೆ ಅಭಿವೃದ್ಧಿಪಡಿಸಲು ಮುಂದಾಗಿದೆ. ಜತೆಗೆ ದ್ವೀಪದಲ್ಲಿನ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಇದನ್ನೂ ಓದಿ:ಸಿಕ್ಕಿಂನಲ್ಲಿ ಮಿನರಲ್ ನೀರಿನ ಬಾಟಲ್‌ಗೆ ನಿಷೇಧ
ದ್ವೀಪದಲ್ಲಿನ ಮುಸ್ಲಿಂ ಸಮುದಾಯ ಭಾರತ ಪ್ರಜೆಗಳೇ ಆಗಿದ್ದಾರೆ. ಅವರು ದೇಶ ಭಕ್ತರು ಎನ್ನುವುದನ್ನು ನಿರೂಪಿಸಬೇಕಾಗಿಯೇ ಇಲ್ಲ ಎಂದಿದ್ದಾರೆ. ಕೇಂದ್ರ ಸಚಿವರನ್ನು ದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಮತ್ತು ಇತರ ಗಣ್ಯರು, ಸೇನೆಯ ಹಿರಿಯ ಅಧಿಕಾರಿ ಗಳು ಬರಮಾಡಿಕೊಂಡರು.