Advertisement
ಪಟ್ಟಣದ ಬಿಜಿಎಸ್ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ 46 ವರ್ಷದ ರಾಜಕಾರಣದಲ್ಲಿ ಜನರ ಬೆಂಬಲದಿಂದ ರಾಜಕಾರಣ ಮಾಡಿ, ಕ್ಷೇತ್ರದ ಜನರಿಗೆ ಗೌರವ ತಂದಿದ್ದೇನೆ.
Related Articles
Advertisement
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂದು ಪಕ್ಷದಲ್ಲಿ, ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ನಮಗೆ ಪ್ರತಿ ಸ್ಪರ್ಧಿಯೇ ಇಲ್ಲ ಎಂದು ಬೀಗುತ್ತಿದ್ದರು. ಪಕ್ಷದ ವರಿಷ್ಠರು ಪ್ರಸಾದ್ ಹೆಸರು ಸೂಚಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಉಸಿರೇ ನಿಂತು ಹೋಗಿದೆ ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಯು.ಎಸ್.ಶೇಖರ್, ಮುಖಂಡರಾದ ಕೃಷ್ಣಸ್ವಾಮಿ, ಸಿದ್ಧಲಿಂಗಸ್ವಾಮಿ, ಅಪ್ಪಣ್ಣ, ಪುರಸಭೆ ಮಾಜಿ ಸದಸ್ಯ ವಿವೇಕ್, ಮೊತ್ತ ಬಸವರಾಜಪ್ಪ, ಜೆ.ಪಿ.ಚಂದ್ರಶೇಖರ್, ವೈ.ಟಿ.ಮಹೇಶ್, ಕೆಂಡಗಣ್ಣಸ್ವಾಮಿ, ಲೋಕೇಶ್, ಮಾದೇಶ್, ರಾಕೇಶ್ ಶರ್ಮ ಇತರರಿದ್ದರು.
ಧ್ರುವಗೆ ನನ್ನ ಸಹಾಯ ಗೊತ್ತಿಲ್ಲವೇ?: ಧ್ರುವನಾರಾಯಣ ಕುತಂತ್ರ ರಾಜಕಾರಣಿಯಾಗಿದ್ದು, ಪೊಲೀಸ್ ಮಾಹಿತಿದಾರ ಇದಾಂಗೆ, ಇಂದು ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದಾರೆ. ಸಂತೇಮರಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತದ ಅಂತರದಲ್ಲಿ ಗೆಲ್ಲಲು ಯಾರು ಕಾರಣ, ಅಲ್ಲದೇ ಕೊಳ್ಳೇಗಾಲ ಕ್ಷೇತ್ರದಲ್ಲಿ ಟಿಕೆಟ್ ಕೋಡಿಸಿದವರು ಯಾರು,
ಕಳೆದ ಎರಡು ಅವಧಿಗೆ ಸಂಸದರನ್ನಾಗಿ ಮಾಡಲು ಶ್ರಮಿಸಿದವರು ಯಾರು ಎಂದು ಪ್ರಶ್ನಿಸಿದ ಶ್ರೀನಿವಾಸಪ್ರಸಾದ್, ದೆಹಲಿಗೆ ಹೋಗಿ ಬಿ.ಫಾರಂ ಕೊಡಿಸಿದ್ದನ್ನು ಧ್ರುವ ಮರೆತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಿರುವುದನ್ನು ಕ್ಷೇತ್ರದ ಜನ ನೋಡುತ್ತಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶ್ರೀನಿವಾಸ್‌ಪ್ರಸಾದ್ ವಾಗ್ಧಾಳಿ ನಡೆಸಿದರು.